ಎಪ್ರಿಲ್‌ನಲ್ಲಿ ಸಿಗಂಧೂರು ಸೇತುವೆ ಪ್ರಧಾನಿಯಿಂದ ಉದ್ಘಾಟನೆ : ಸಂಸದ

Kranti Deepa

ಶಿವಮೊಗ್ಗ,ಡಿ.25  : ಕಳಸವಳ್ಳಿ-ಸಿಗಂದೂರು ಸೇತುವೆ ಮುಗಿಯುವ ಹಂತಕ್ಕೆ ತಲುಪಿದೆ. ಎಪ್ರ್ರಿಲ್‌ನಲ್ಲಿ ಪ್ರಧಾನಿ ಮೋದಿಯಿಂದ ಉದ್ಘಾಟನೆಗೊಳ್ಳಲು ಸೇತುವೆ ಸಿದ್ಧ್ದವಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾvನಾಡಿದ ಅವರು, 2019 ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಬಂದು ಕೇಬಲ್ ಹ್ಯಾಂಗಿಂಗ್ ಬ್ರಿಡ್ಜ್ ಗೆ ಚಾಲನೆ ನೀಡಿದ್ದಾರೆ. 6 ವರ್ಷಗಳ ಬಳಿಕ ಬ್ರಿಡ್ಜ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇದರ ನಿರ್ಮಾಣದಿಂದ ಕೊಲ್ಲೂರು, ಉಡುಪಿ, ಧರ್ಮಸ್ಥಳ ಮೊದಲಾದ ಪುಣ್ಯ ಕ್ಷೇತ್ರಗಳು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾಗಿದೆ ಎಂದರು.

ಡ್ರೋಣ್ ಮೂಲಕ ಸೇತುವೆ ಚಿತ್ರ ತೆಗೆಯಲಾಗಿದ್ದು ಅದ್ಭ್ಬುತವಾಗಿ ಕಂಡುಬಂದಿದೆ.2.25   ಕಿ. ಮೀ ಉದ್ದದ ಸೇತುವೆಯನ್ನು 450 ಕೋಟಿಯಲ್ಲಿ 11 ಪಿಲ್ಲರ್‌ಗಳಲ್ಲಿ ನಿರ್ಮಿಸಲಾಗಿದೆ ಗ್ರಾಮಪಂಚಾಯಿತಿಯ ಮಟ್ಟದಲ್ಲಿದ್ದ ಸಾಗರ-ಕಳಸವಳ್ಳಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಸೇತುವೆ ನಿರ್ಮಿಸಲಾಗಿದೆ.

ಇದನ್ನು ಮೂರುವರೆ ವರ್ಷದ ಹಿಂದೆ ಪ್ರಯತ್ನಿಸಿ ಸೇತುವೆ ನಿರ್ಮಿಸಲಾಗಿದೆ ಎಂದರು.ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿಯನ್ನ 8.5  ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಿಟಿಯಲ್ಲಿ ಎಂ ಆರ್ ಎಸ್ ವೃತ್ತದಿಂದ ಹರಕೆರೆಗೆ ಹೋಗುವ ಐದು ಕಿ. ಮೀ.ರಸ್ತೆಗೆ ಭೂಮಿ ಬೇಕಿದೆ. ಇದಕ್ಕಾಗಿ 200 ಕೋಟಿ ವೆಚ್ಚ ತಗುಲಲಿದೆ. ಇದಕ್ಕೂ ಸಚಿವ ಗಡ್ಕರಿಯವರಿಗೆ ಮನವಿ ಸಲ್ಲಿಸಿದ್ದೇನೆ. ಇದು ಸಹ ತಡವಾಗಿದೆ. ಆದರೆ ಆದಷ್ಟು ಬೇಗ ಸಂಪೂರ್ಣಗೊಳ್ಳಲಿದೆ ಎಂದರು.

ಶಿವಮೊಗ್ಗ, ಹೊನ್ನಾಳಿ, ಮಲೆಬೆನ್ನೂರು, ಹರಿಹರ ಮಾರ್ಗವಾಗಿ ಹೋಗುವ ಹೊಸಪೇಟೆ ರಸ್ತೆಯೂ ಸಹ ರಾಷ್ಟ್ರೀಯ ಹೆದ್ದಾರಿಗೆ ಏರಿಸಲಾಗಿದೆ. ರೈಲ್ವೆಯಲ್ಲೂ ಸಹ ಸಾಕಷ್ಟು ಪ್ರಗತಿ ಕಾಣಲಾಗಿದ್ದು ಶಿವಮೊಗ್ಗ-ಶಿಕಾರಿಪುರ ರೈಲ್ವೆ ಭೂಮಿ ಸ್ವಾಧೀನ ಪಡೆಯಲಾಗಿದೆ. ಅದರಂತೆ ಶಿಕಾರಿಪುರ ಮತ್ತು ರಾಣೆಬೆನ್ನೂರಿನ ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ಮಾಡಬೇಕಿದೆ. ಅದನ್ನೂ ಶೀಘ್ರದಲ್ಲಿ ಮುಗಿಸಲಾಗುವುದು. ಇದು ಮುಗಿದರೆ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್
ನೈಟ್ ಲ್ಯಾಂಡಿಂಗ್ ಅಳವಡಿಸುವ ಮೂಲಕ ವಿಸಿಬಲಿಟಿ ಕ್ಲಿಯರ್ ಮಾಡಲಾಗುತ್ತಿದೆ. ಈ ಕಾರ್ಯ ಎರಡು ಮೂರು ತಿಂಗಳಲ್ಲಿ ಮುಗಿಯಲಿದೆ. 2024 ರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ 8.5 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮೈಸೂರು ನಿಲ್ದಾಣದಿಂದ 7.5 ಸಾವಿರ ಜನ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಿವಮೊಗ್ಗದಿಂದಲೇ ಹೆಚ್ಚು ಜನ ಪ್ರಯಾಣಿಸಿದ್ದಾರೆ.
ಶೀಘ್ರದಲ್ಲಿಯೇ ಕಾರ್ಗೋ ವಿಮಾನ ಹಾರಾಟ: ನೈಟ್ ಲ್ಯಾಂಡಿಂಗ್ ನಂತರ ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್ ಮತ್ತು ಪೂನಾ ಕಡೆಗೆ ಹೊಸ ವಿಮಾನ ಹಾರಾಟಕ್ಕೆ ಇಂಡಿಗೋ ಸಂಸ್ಥೆ ಅರ್ಜಿ ಹಾಕಿಕೊಂಡಿದೆ. ಅದಕ್ಕೆ ಕೇಂದ್ರ ಸರ್ಕಾರ ಅಸ್ತು ಎನ್ನಲಿದೆ. ಇದಾದ ನಂತರ ರೈತರ ಬೆಳೆಯನ್ನು ಬೇರೆಡೆ ಸಾಗಿಸಲು ಕಾರ್ಗೋ ವಿಮಾನಗಳು ಶಿವಮೊಗ್ಗಕ್ಕೆ ಬಂದಿಳಿಯಲಿದೆ. 50 ಕೋಟಿ ವೆಚ್ಚದಲ್ಲಿ ಇದಕ್ಕೆ ವ್ಯಯಮಾಡಲಾಗುತ್ತಿದೆ.
-ಬಿ ವೈ ರಾಘವೇಂದ್ರ, ಸಂಸದ

Share This Article
";