ಶಿವಮೊಗ್ಗ,ಅ.29 : ವಿಜಯಪುರದಲ್ಲಿ ಒಂದು ಲಕ್ಷ ಎಕರೆ ಇದ್ದ ವಕ್ ಜಮೀನು ಇಂದು 8-10 ಲಕ್ಷ ಎಕರೆ ಜಮೀನು ಆಗಿರುವುದು ಹೇಗೆ ಸಾಧ್ಯ ಎಂದು ಸಂಸದ ಬಿ.ವೈ. ರಾಘ ವೇಂದ್ರ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪಾರ್ಲಿ ಮೆಂಟ್ ನಲ್ಲಿ ವಕ್ ಬಿಲ್ ತಿದ್ದುಪಡಿ ತರುವ ಮುನ್ನ ಈ ಎಲ್ಲಾ ಆಸ್ತಿಯನ್ನು ವಕ್ ಆಸ್ತಿ ಎಂದು ಘೋಷಿಸಿಕೊಳ್ಳುವ ತರಾತುರಿ ನಡೆದಿದೆ. ಇದು ಆಸ್ತಿ ಕಬಳಿಸುವ ಷಡ್ಯಂತ್ರ. ಅದಕ್ಕಾಗಿಯೇ ವಿಜಯಪುರದಲ್ಲಿ ರೈತರ ಹೊಲಕ್ಕೂ ವಕ್ಪ್ ಬೋರ್ಡ್ ನೋಟಿಸ್ ನೀಡಿದೆ ಎಂದು ಕಿಡಿಕಾರಿದರು.
ವಕ್ ಬೋರ್ಡ್ ಕ್ರಮದ ವಿರುದ್ದ ಹರಿಹಾಯ್ದ ಅವರು, ಜಂಟಿ ಸಂಸದೀಯ ಸಮಿತಿಯ ಮುಂದೆ ವಕ್ ಬೋರ್ಡ್ ತಿದ್ದುಪಡಿ ಚರ್ಚೆ ಆಗಲಿದೆ. ಚಳಿಗಾಲದ ಅವೇಶನದಲ್ಲಿ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಗ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದರು.
ಶಾಸಕ ಚೆನ್ನಿ ಆಕ್ರೋಶ:
ವಕ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಎಸ್.ಎನ್. ಚನ್ನ ಬಸಪ್ಪ ರೈತರ ಜಮೀನುಗಳನ್ನು ಕಸಿದು ಕೊಂಡು ವಕ್ ಮಂಡಳಿಗೆ ಸೇರಿಸುತ್ತಿದ್ದಾರೆ ಎಂದು ಆರೋಪಿಸಿದರು.ಮುಸಲ್ಮಾನ್ ಲ್ಯಾಂಡ್ ಮಾಫಿಯಾ ವನ್ನು ವಕ್ ಮೂಲಕ ಕಾಂಗ್ರೆಸ್ ಮಾಡು ತ್ತಿದೆ. ರೈತರಿಗೆ ನೋಟಿಸ್ ಕೊಟ್ಟರೂ, ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಶಿವಮೊಗ್ಗದಲ್ಲಿ ಕೂಡ ಶಿವಪ್ಪನಾಯಕನ ವಂಶಸ್ಥರ ಸಮಾ ಜಾಗವನ್ನು ವಕ್ ಮಂಡಳಿಗೆ ಸೇರಿಸುವ ಹುನ್ನಾರ ನಡೆದಿದೆ. ಈಗಾಗಲೇ ಈದ್ಗಾ ಮೈದಾನ ನಮ್ಮ ಜಾಗ ಎಂದು ಹೇಳುತ್ತಿದ್ದಾರೆ. ಅದು ಮಹಾನಗರ ಪಾಲಿಕೆ ಹೆಸರಿನಲ್ಲಿದೆ. ಆಸ್ತಿ ಸಂರಕ್ಷಣೆ ಮಾಡಲು ಆಗದಿರುವ ಸರ್ಕಾರ ಇದು. ಜಮೀರ್ ಇದು ನಿಮ್ಮಪ್ಪನ ಮನೆ ಆಸ್ತಿಯಲ್ಲ, ನೀನು ಇರುವ ಬಂಗಲೆ ಜಾಗ ವಕ್ ಬೋರ್ಡ್‌ಗೆ ಬರೆದುಕೊಡು. ಆಗ ಗೊತ್ತಾಗುತ್ತದೆ. ಈ ರಾಜ್ಯವನ್ನು ವಕ್ ರಾಜ್ಯವನ್ನಾಗಿ ಮಾಡಲು ಹಿಂದೂ ಸಮಾಜ ಬಿಡುವುದಿಲ್ಲ ಎಂದರು.
ವಕ್ ಕಾಯ್ದೆ ತಿದ್ದುಪಡಿಯಾಗಲಿ:
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ರೈತರ ಜಮೀನನ್ನು ನಮ್ಮ ಜಮೀನು ಎಂದು ಹೇಳಿ ಸುಪರ್ದಿಗೆ ತೆಗೆದುಕೊಳ್ಳಲು ಜಮೀರ್ ಅಹಮ್ಮದ್ ಹೊರಟಿದ್ದಾರೆ. ಅವರಿಗೆ ತಳಬುಡ ಗೊತ್ತಿಲ್ಲ. ಪಹಣಿ ತಿದ್ದಪಡಿಯಾಗಿದೆ ಎಂದು ಭೂಸ್ವಾನಕ್ಕೆ ಹೋಗುವ ಕೆಲಸವನ್ನು ಅವರು ಮಾಡಿ ಶಾಂತಿಯನ್ನು ಕದಡುತ್ತಿದ್ದಾರೆ ಎಂದು ದೂರಿದರು.
ದೇಶದಲ್ಲಿ ವಕ್ ಕಾಯ್ದೆ ಹಾಗೂ ಅರಣ್ಯ ಕಾಯ್ದೆಗಳು ಬದಲಾಗಬೇಕು. ವಕ್ಪ್ ಬಗ್ಗೆ ಪ್ರಶ್ನೆ ಮಾಡಲು ಕೋರ್ಟ್‌ನಲ್ಲಿ ಬರುವುದಿಲ್ಲ. ವಕ್ ಕೋರ್ಟ್‌ನಲ್ಲೇ ಆಗಬೇಕು. ಸಾಗರದಲ್ಲೂ ಕೂಡ ವಿವಾದವಿದೆ. ಗಣಪತಿ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ವಕ್ ಜಮೀನು ಎಂದು ಹೇಳಿಕೊಂಡು ಬಂದಿದ್ದರು. ಇದಕ್ಕೆಲ್ಲಾ ಪರಿಹಾರ ಎಂದರೆ ವಕ್ ಕಾಯ್ದೆ ತಿದ್ದುಪಡಿಯಾಗಬೇಕು ಎಂದರು.