ಶಿವಮೊಗ್ಗ : ಹೊಸೂಡಿ ಗ್ರಾಮ ಪಂಚಾಯತಿಯಲ್ಲಿ ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಮಾರಾಮಾರಿ ನಡೆದಿದೆ.
ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಎದುರೇ ಈ ಮಾರಾ ಮಾರಿ ನಡೆದಿದೆ. ಗ್ರಾ.ಪಂ.ನ ಚಿಕ್ಕ ಮರಡಿಯ ನೀರಗಂಟಿ ಹನುಮಂತಪ್ಪ ಎಂಬುವರ ಮೇಲೆಯೇ ಗ್ರಾಮಸ್ಥ ಅಜರ್ ಎಂಬಾತ ತಾನು ಕುಳಿತ್ತಿದ್ದ ಮರದ ಖುರ್ಚಿಯನ್ನೇ ಎಸೆದು ಹಲ್ಲೆ ಮಾಡಿದ ವೀಡಿಯೋ ಈಗ ವೈರಲ್ ಆಗಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.
ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಎಎಸ್ಐ , ಸಿಬ್ಬಂದಿಗಳಾದ ಕಲ್ಲನಗೌಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಂ.ಪಂ.ಅಧ್ಯಕ್ಷರು, ಕೆಲ ಸದಸ್ಯರ ಹಾಗೂ ಪಿಡಿಒ ಮಂಜಮ್ಮನವರೇ ಈ ಕುಕೃತ್ಯಕ್ಕೆ ಶಾಮೀಲು ಎಂಬ ಆರೋಪ ಪ್ರತ್ಯಕ್ಷ ದರ್ಶಿಗಳದ್ದು ಎನ್ನಲಾಗಿದೆ.
ಪೊಲೀಸರ ಸಮಗ್ರ ತನಿಖೆಯಿಂದ ಸತ್ಯ ಇನ್ನಷ್ಟೇ ಹೊರಬರಬೇಕಾಗಿದೆ.