ಶಿವಮೊಗ್ಗ: ನಬಾರ್ಡ ಗೆ ಈ ಬಾರಿ ಕೇಂದ್ರ ಸರ್ಕಾರವು ಅರ್ಧಕ್ಕಿಂತಲೂ ಹೆಚ್ಚು ಅನುದಾನ , ಸಾಲದ ಹಣವನ್ನು ಕಡಿತ ಮಾಡಿರುವುದು ಮತ್ತು ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ಸಹಕಾರ ಯೂನಿಯನ್ ಜ. 29 ರಂದು ಬೆಂಗಳೂರಿನಲ್ಲಿರುವ ರಿಸರ್ವ್ ಬ್ಯಾಂಕ್ ಶಾಖೆ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿವೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮತ್ತು ಸಹಕಾರ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ನಬಾರ್ಡ್ ಶೇಕಡ 85 ರಷ್ಟು ಆಂದರೆ 5,600 ಕೋಟಿಯಿಂದ 2,240 ಕೋಟಿಗೆ ಅನುದಾನ ಕಡಿತಗೊಳಿಸಿದೆ.
ಇದರಿಂದಾಗಿ, ಸ್ಥಳೀಯ ಸಹಕಾರ ಸಂಘಗಳನ್ನು ಮತ್ತು ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳನ್ನು ದುರ್ಬಲಗೊಳಿಸಿ ಖಾಸಗಿ ಪೈನಾನ್ಸ್ ಸಂಸ್ಥೆಗಳು ಹಾಗೂ ಶ್ರೀಮಂತರ ಬ್ಯಾಂಕ್‌ಗಳನ್ನು ರೈತರು ಅನಿವಾರ್ಯವಾಗಿ ಅವಲಂಬಿಸುವಂತೆ ಮಾಡುವ ಹುನ್ನಾರವಾಗಿದೆ. ಇದರಿಂದ ಕೃಷಿಕರು ಮತ್ತು ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒತ್ತೆಯಿಡುವ ಉದ್ದೇಶ ಇದರ ಹಿಂದೆ ಇದೆ ಎಂದರು.
ಈ ರೈತ ವಿರೋಧ ನೀತಿಯನ್ನು ಸಹಕಾರಿ ಯೂನಿಯನ್ ಶಿವಮೊಗ್ಗ ಜಿಲ್ಲೆ ಇವರು ಈ ಮೂಲಕ ಜಂಟಿಯಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಜಿಲ್ಲಾ ಖಂಡಿಸುವುದಾಗಿ ಹೇಳಿದ ಅವರು, ನಬಾರ್ಡ ಉಳಿದರೆ ಮಾತ್ರ ಕೃಷಿ ಕ್ಷೇತ್ರ ಉಳಿಯುತ್ತದೆ, ರಾಜ್ಯದ ರೈತರು ಉಳಿಯುತ್ತೇವೆ . ಆದ್ದರಿಂದ ಕೇಂದ್ರ ಸರ್ಕಾರ ನಬಾರ್ಡ ಬ್ಯಾಂಕಿಗೆ ಹೆಚ್ಚಿನ ಅನುದಾನ, ಧನ ಸಹಾಯ ಮಾಡಲು ಒತ್ತಾಯಿಸಿದರು.
ಜನ ಸಾಮಾನ್ಯರಿಗೆ ಬಡವರಿಗೆ ದುಬಾರಿ ಬಡ್ಡಿ ದರದಲ್ಲಿ ಸಾಲ ನೀಡಿ ಅವರ ಜೀವ ಹಿಂಡುತ್ತಿರುವ ನೂರಾರು ಜನರ ಆತ್ಮಹತ್ಯೆ ಮತ್ತು ವಲಸೆಗೆ ಕಾರಣವಾಗಿರುವ ಖಾಸಗಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳವನ್ನು ತಪ್ಪಿಸಲೇ ಬೇಕಾಗಿದೆ. ಇದಕ್ಕೆ ಕೇಂದ್ರ ರಿಸರ್ವ ಬ್ಯಾಂಕ್ ನಿಯಂತ್ರಣ ತರುವ ಹಣಕಾಸಿನ ನೀತಿಯನ್ನು ತಕ್ಷಣ ಜಾರಿಗೊಳಿಸಬೇಕಾಗಿ ಒತ್ತಾಯಿಸಿದರು.
ಜ. 29 ರ ಸಮಯ 11 ಕ್ಕೆ ಗಂಟೆಯಿಂದ ಬೆಳಗ್ಗೆ ಬುಧವಾರದಂದು ಬೆಂಗಳೂರಿನ ನೃಪತುಂಗ ರಸ್ತೆಯಲಿರುವ ರಿಸರ್ವ ಬ್ಯಾಂಕ್ ಕಛೇರಿ ಎದುರು ಧರಣಿ ಸತ್ಯಾಗ್ರಹವನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ರೈತರು ಮತ್ತು ಸಹಕಾರಿ ಸಂಘದ ಪ್ರತಿನಿಧಿಗಳು ಹಮ್ಮಿಕೊಂಡಿದ್ದಾಗಿ ವಿವರಿಸಿದರು.
ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸತೀಶ್ ಅಂಗಡಿ, ಪ್ರಗತಿಪರ ಒಕ್ಕೂಟದ ಎಚ್ ಬಿ ರಾಘವೇಂದ್ರ, ರೈತ ಸಂಘದ ಮಹಿಳಾ ಸಂಚಾಲಕಿ ಭಾಗ್ಯ ಗೌಡ ಉಪಸ್ಥಿತರಿದ್ದರು.