ತೀರ್ಥಹಳ್ಳಿ, ಡಿ.25 : ಪಟ್ಟಣದ ರಾಮೇಶ್ವರ ದೇವರ ಸನ್ನಿದಿಯ ಎಳ್ಳಮಾವಾಸ್ಯೆ ಜಾತ್ರೆಯನ್ನು ಅಂದಾಜು 17 ಲಕ್ಷ ರೂ.ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಾತ್ರೆಯ ತೆಪ್ಪೋತ್ಸವ ಸಮಿತಿಯ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಡಾ|| ಟಿ.ಎಲ್.ಸುಂದರೇಶ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಹೆಸರಾಂತ ಏಳ್ಳಮಾವಾಸ್ಯೆ ಜಾತ್ರೆಯನ್ನು ಮೂರು ದಿನಗಳ ಕಾಲ ವಿಶೇಷವಾಗಿ ನೆಡೆಯಲಿದೆ. ಡಿಸೆಂಬರ್ 30 ರ ಸೋಮವಾರದಂದು ಬೆಳಿಗ್ಗೆ ಪರುಶುರಾಮ ತೀರ್ಥಪೂಜೆಯೊಂದಿಗೆ ಜಾತ್ರೆ ಆರಂಭಗೊಳ್ಳಲಿದೆ.ಡಿಸೆಂಬರ್ 31 ರ ಮಂಗಳವಾರ ಮನ್ಮಹಾರಥಾರೋಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜನವರಿ 1 ರಂದು ರಾತ್ರಿ 7 ಕ್ಕೆ ಸಾರ್ವಜನಿಕರಿಂದ ತೆಪ್ಪೋತ್ಸವ, ನಂತರ ತುಂಗಾ ನದಿಯ ತಟದಲ್ಲಿ ಸಿಡಿಮದ್ದು ಹಾಗೂ ಬಾಣ ಬಿರುಸುಗಳ ಪ್ರದರ್ಶನ ನಡೆಯಲಿದೆ ಎಂದರು.
ಈ ಜಾತ್ರೆಯ ಅಂಗವಾಗಿ ಮೂರು ದಿನಗಳು ಭಕ್ತಾದಿಗಳಿಗೆ ರಾಮೇಶ್ವರ ಅನ್ನದಾಸೋಹ ಸಮಿತಿಯವರ ನೇತೃತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಬಾರಿ ಜಾತ್ರೆಯ ಅಂಗವಾಗಿ ವಿಶೇಷ ಸಾಂಸ್ಕೃತಿಕ ಸಂಜೆ ನೆಡೆಯಲಿದ್ದು ಡಿಸೆಂಬರ್ 30 ರಂದು ರಾತ್ರಿ ತುಂಗಾನದಿಯ ತೀರದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದಿಂದ ಸಂಗೀತಾ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಜನವರಿ 1 ರ ರಾತ್ರಿ ತೀರ್ಥಹಳ್ಳಿ ಮೂಲದ ಅಂತರಾಷ್ಟ್ರೀಯ ನೃತ್ಯ ಕಲಾವಿದ ಉದಯಕುಮಾರ್ ಶೆಟ್ಟಿ ತಂಡದಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ .
ಈ ಪತ್ರಿಕಾಗೋಷ್ಟಿಯಲ್ಲಿ ಜಾತ್ರಾ ಸಮಿತಿಯ ಪದಾಧಿಕಾರಿಗಳಾದ ಪಾಂಡುರಂಗಪ್ಪ,ಅಶೋಕ್ ಶೆಟ್ಟಿ,ಶ್ರೀನಿವಾಸ್,ಸಂಜಯ್,ಟಿ.ಜೆ.