ಶಿವಮೊಗ್ಗ: ಭದ್ರಾವತಿಯಲ್ಲಿ ಈದ್ ಮಿಲಾದ್ ನಿಮಿತ್ತ ಎರಡು ಕಡೆ ಥರ್ಮಕೂಲ್ ನಿಂದ ನಿರ್ಮಿಸಿದ ಖಡ್ಗವನ್ನು ಅಳವಡಿಸಲಾಗಿತ್ತು. ಈಗ ತೆರವುಗೊಳಿಸಲಾಗಿದೆ ಎಂದು ಎಸ್ ಪಿಮಿಥುನ್ ಕುಮಾರ್ ಹೇಳಿದ್ದಾರೆ.
ಭದ್ರಾವತಿಯಲ್ಲಿ ಟಿಪ್ಪು ಸುಲ್ತಾನ್, ಔರಂಗಜೇಬ್ ಫ್ಲೆಕ್ಸ್, ಟಿಪ್ಪು ಖಡ್ಗ ಪ್ರದರ್ಶನ ಮಾಡಲಾಗಿದ್ದು, ಈ ಬಗ್ಗೆ ಮಾಹಿತಿ ಬಂದಾಕ್ಷಣ ಪೊಲೀಸ್ ಇಲಾಖೆ ಫ್ಲೆಕ್ಸ್ ಹಾಗೂ ಖಡ್ಗ ತೆರವು ಮಾಡಿದೆ ಎಂದಿದ್ದಾರೆ..
ಇಂದು ಈದ್ ಮಿಲಾದ್ ಹಬ್ಬದ ಮೆರವಣಿಗೆ ನಡರಯಲಿದೆ.
ಈ ಹಿನ್ನೆಲೆಯಲ್ಲಿ ಅಳವಡಿಸಿದ್ದ ಫ್ಲೆಕ್ಸ್, ಖಡ್ಗವನ್ನು ಭದ್ರಾವತಿ ನಗರದ ಜಂಡಾ ಕಟ್ಟೆ ಸರ್ಕಲ್ ಬಳಿ ಖಾಜಿಮೊಹಲ್ಲದಲ್ಲಿ ಅಳವಡಿಸಲಾಗಿತ್ತು. ಮೆರವಣಿಗೆ ಅಂಗವಾಗಿ ಅಳವಡಿಸಿದ್ದ ಫ್ಲೆಕ್ಸ್ ಖಡ್ಗವನ್ನು ತೆರವುಗೊಳಿಸಲಾಗಿದೆ.
ಭದ್ರಾವತಿಯ ಸೀಗೆಬಾಗಿ , ಜಟ್ ಪಟ್ ನಗರ ಮೊದಲಾದ ಕಡೆ ಅಳವಡಿಸಿದ್ದ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಫ್ಲೆಕ್ಸ್ಗಳನ್ನೂ ಸಹ ತೆರವುಗೊಳಿಸಲಾಗಿದೆ ಎಂದಿದ್ದಾರೆ.