ಹಿಂದೂ ಪರಂಪರೆಯಲ್ಲಿ ದೀಕ್ಷೆಗೆ ಮಹಾತ್ವದ ಸ್ಥಾನ: ಬಿ.ಎಸ್.ಯಡಿಯೂರಪ್ಪ

Kranti Deepa

ಶಿವಮೊಗ್ಗ ,ಡಿ.05 : ಹಿಂದೂ ಪರಂಪರೆಯಲ್ಲಿ ಅನೇಕ ದೀಕ್ಷೆಗಳಿವೆ ಆದರಲ್ಲಿ ಚಿನ್ಮಯಾನುಗ್ರಹ ದೀಕ್ಷೆ ಸಹ ಒಂದಾಗಿದೆ.ಇದು ಗುರು ಪರಂಪರೆಯಲ್ಲಿ ಮಹಾತ್ವದ ಸ್ಥಾನ ಪಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹೇಳಿದರು.ಗುರುವಾರ ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನ ದಲ್ಲಿ ಆಯೋಜಿಸಿದ್ದ  ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳ ಸಿದ್ದ ಸ್ವಾಮಿ ಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಿನ್ಮಯಾನುಗ್ರಹ ದೀಕ್ಷಾ ಮೂಲಕ ಅಂತರಂಗವನ್ನ ಶುದ್ಧ ಪಡೆಸಿಕೊಂಡು ಸಮಾಜದಲ್ಲಿ ಧಾಮರ್ಮಿಕ ಕಾರ್‍ಯವನ್ನು ಮಾಡುತ್ತಾ ಮುನ್ನಡೆಯುತ್ತಾರೆ. ಈ ದೀಕ್ಷೆನವನ್ನ ಸಂಪಾದಿಸಿ ಸಮಾಜಮುಖಿ ಚಿಂತನೆಗಳನ್ನ ಅಳವಡಿಸಿಕೊಂಡು ಎಲ್ಲರನ್ನ ಒಗ್ಗೂಡಿಸಿಕೊಂಡು ಸಾಗಬೇಕು. ಈ ನಿಟ್ಟಿನಲ್ಲಿ ಶ್ರೀಗಳು ಮುಂದೆ ಸಾಗುತ್ತಾರೆ ಎಂದರು.

ದೀಕ್ಷೆ ಪಡೆಯುವ ಮೂಲಕ ಬಸ ಕೇಂದ್ರದ ಬಸ ಮ ರುಳಸಿದ್ದ ಸ್ವಾಮೀಜಿಯವರು ಪರಿ ಪೂರ್ಣ ಗುರುಗಳಾಗಿ ಹೊರ ಹೊಮ್ಮಿದ್ದಾರೆ. ಇವರು ಭವಿಷ್ಯ ದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಹೋಗಲಿದ್ದಾರೆ. ಇವರಿಗೆ ಆ ಚೈತನ್ಯವೂ ಇದೆ. ನಾಡಿನ ಎಲ್ಲ ಮಠಾಶ್ವರರ ಆಶೀರ್ವಾದ ಶ್ರೀಗಳ ಬೆನ್ನಿಗೆ ಇರುವುದರಿಂದ ಸ್ವಾಮೀಜಿಯವರು ಭವಿಷ್ಯದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಲಿದ್ದಾರೆ ಎಂದರು.

ಕಾರ್‍ಯಕ್ರಮ ಉದ್ಘಾಟಿಸಿದ ಸಂಸದ ಬಿ.ವೈ.ರಾಘ ವೇಂದ್ರ ಮಾತನಾಡಿ, ಮಾಂಸಮಯ ಶರೀರವನ್ನು ಮಂತ್ರಮಯ ಶರೀರವನ್ನಾಗಿ ಮಾಡಿಕೊಂಡ ಸಂದರ್ಭ ಇದು. ನಮ್ಮೆಲ್ಲರ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚಾಗುತ್ತಿದೆ. ನಾವೆಲ್ಲರೂ ಧಾರ್ಮಿಕವಾಗಿ ಬದುಕಬೇಕಾಗಿದೆ ಎಂದರು.

ಡಾ. ಬಸವಮರುಳಸಿದ್ದ ಸ್ವಾಮೀಜಿ ಗಳು ಪೀಠಾಪತಿಗಳಾಗಿ, ಯೋಗ ಯೋಗ ಚಿನ್ಮಯ ಮುದ್ರೆ ಪಡೆದು ಕೊಂಡಿದ್ದಾರೆ. ಜವಾಬ್ದಾರಿ ಹೆಚ್ಚು ವಂತಹ ಕಾರ್ಯ ಇವತ್ತಿನಿಂದ ಶುರುವಾಗಿದೆ. ಯೋಗದ ಮುಖಾಂ ತರ ಮಠಗಳನ್ನು ಪರಿವರ್ತನೆ ಮಾಡಿ ಹೆಚ್ಚು ಸದ್ಭಕ್ತರಿಗೆ ಸಹಾಯವಾಗಿ, ಆಧ್ಯಾತ್ಮಿಕ ಬದಲಾವಣೆ ಮಾಡಿಕೊಂಡು ಶಕ್ತಿ ನೀಡುತ್ತಿವೆ. ಅವರು ಹಾಕಿಕೊಟ್ಟ ಜಾಗದಲ್ಲಿ ಹೆಜ್ಜೆ ಹಾಕುವುದರ ಮೂಲಕ ಜೀವನ ಸಾರ್ಥವಾಗುತ್ತದೆ. ಇವತ್ತಿನ ಪವಿತ್ರವಾದಂತ ಧಾರ್ಮಿಕ ಶಕ್ತಿಗೆ ಕೈ ಜೋಡಿಸುವಂತಹ ಪವಿತ್ರ ಕಾರ್ಯಕ್ರಮ ಇದಾಗಿದ್ದು,12 ನೇ ಶತಮಾನದ ಅನುಭವ ಮಂಟ ವನ್ನು ಮತ್ತೊಮ್ಮೆ ನಮ್ಮ ಕಣ್ಣ ಮುಂದೆ ನೋಡುತ್ತೀರುವಂತಹ ವೇದಿಕೆ ಇದಾಗಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಚಿನ್ಮಯ ಎಂದರೆ ದೈವೀಕ, ದೀಕ್ಷೆ ಎಂದರೆ ಒಳ್ಳೆಯ ಸನ್ಮಾರ್ಗದಲ್ಲಿಹೋಗು ವಂತಹದ್ದು, ಪಂಚಭೂತಗಳಿಂದ ಆದಂತಹ ಶರೀರಕ್ಕೆ ಒಂದು ಶಕ್ತಿ ಯನ್ನು ಕೊಡುವಂತಹ ದೀಕ್ಷೆಯೇ ಚಿನ್ಮಯಾನುಗ್ರಹ ದೀಕ್ಷೆ. ಜಂಗಮ ದೀಕ್ಷೆ ಪಡೆದಿದ್ದ ಡಾ. ಶ್ರೀ ಮರುಳಸಿದ್ಧ ಸ್ವಾಮಿಗಳು ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದುಕೊಂಡಿದ್ದಾರೆ. ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಮಹಾದೇವ ಆಗುತ್ತಾನೆ. ಆತ್ಮ ಪರಮಾತ್ಮನಲ್ಲಿ ವಿಲೀನವಾಗಲುಈ ಪ್ರಕ್ರಿಯೆ ಆಗಬೇಕು. ಗುರು ಎಂದರೆ ಅದ್ಭುತ ಶಕ್ತಿ, ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕ್ಕನ್ನು ನೀಡುವವರು ಎಂದರು.

ಇದೇ ಸಂದರ್ಭದಲ್ಲಿ ಅಲ್ಲಮ ಪ್ರಭುಗಳ ವ್ಯಕ್ತಿತ್ವ ಪುಸ್ತಕ ಬಿಡುಗಡೆ ಯನ್ನು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ನೆರವೇರಿಸಿದರು.
ಗುರುವಾರ  ಬೆಳಗ್ಗೆ 5 ಗಂಟೆಗೆ ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹಲವಾರು ಲಿಂಗ ಹಸ್ತ ದಿಂದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ  ಚಿನ್ಮಯಾನುಗ್ರಹ ದೀಕ್ಷೆಯನ್ನು ಅನುಗ್ರಹಿಸಿದರು.

ವೇದಿಕೆಯಲ್ಲಿ ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾ ನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮಿಗಳು, ಕಡೂರು ಯಳನಾಡು ಸಂಸ್ಥಾನ ಮಠದ ಜಗ ದ್ಗುರು ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಗಳು, ಅಕ್ಕಿಆಲೂರು ವಿರಕ್ತ ಮಠದ ಶ್ರೀ ಶಿವಬಸವ ಸ್ವಾಮಿಗಳು, ಗುತ್ತಲ ಕಲ್ಮಠ ಶ್ರೀ ಪ್ರಭು ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮಿಗಳು, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ .ರುದ್ರೆ ಗೌಡ,ನಂಜಪ್ಪ ಆಸ್ಪತ್ರೆಯ ಮಾಲೀಕ ಡಿ.ಜಿ ಬೆನಕಪ್ಪ , ಓಪನ್ ಮೈಂಡ್ಸ್ ಶಾಲೆಯ ಕಿರಣ್ ಕುಮಾರ್, ವೀರ ಶೈವ ಸಮಾಜದ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಬಿಜೆಪಿ ಜಿಲ್ಲಾ ಸಂಚಾಲಕ ಎಸ್.ದತ್ತಾತ್ರಿ, ಬಸ ವಂತಪ್ಪ, ಬಸವ ಮರುಳಸಿದ್ಧ ಸ್ವಾಮೀಜಿ ಯವರ ತಾಯಿ ಜಿ.ಎಂ.ಮೀನಾಕ್ಷಮ್ಮ, ಸಹೋದರ ಸುಧಾಕರ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಾನು ಶಿವಮೊಗ್ಗ ನಗರದಲ್ಲಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಭದ್ರ ನೆಲೆಯಾಗಿದ್ದರೆ, ಅದಕ್ಕೆ ಬಿ.ಎಸ್, ಯಡಿಯೂರಪ್ಪ ಕುಟುಂಬ, ಎಸ್.ರುದ್ರೇಗೌಡ ಕುಟುಂಬ ಸೇರಿದಂತೆ ಅನೇಕ ಕುಟುಂಬಗಳು ಕಾರಣವಾಗಿವೆ. ಅವರೆ ಲ್ಲರುಗಳ ಹೆಸರು ಹೇಳಿದರೆ ನನ್ನ ಮಾತು ಕಡಿಮೆಯಾಗುತ್ತದೆ. ಜನ್ಮಕೊಟ್ಟ ತಂದೆ ತಾಯಿಗಳಿಂದ ದೂರವಾದರೂ ನೀವೆಲ್ಲರೂ ತಂದೆ ತಾಯಿಗಳಾಗಿ ಅಣ್ಣ ತಮ್ಮಂದಿರಾಗಿ ನನಗೆ ಮಾರ್ಗದರ್ಶನ ಸಹಕಾರ ನೀಡುತ್ತೇನೆಂದು ಹೇಳಿರುವುದು ನನಗೆ ಇದಕ್ಕಿಂತ ಸೌಭಾಗ್ಯ ಇನ್ನೇನು ಬೇಕು ಎಂದೆನಿಸುತ್ತದೆ. ತಾಂತ್ರಿಕವಾಗಿ ಗುರುವಾಗಿದ್ದೆ, ತಾತ್ವಿಕವಾಗಿ ಆಗಿರಲಿಲ್ಲ. ಬೆಕ್ಕಿನ ಕಲ್ಮಠ ಶ್ರೀಗಳು ಚಿನ್ಮಯಾನುಗ್ರಹ ದೀಕ್ಷೆ ನೀಡುವ ಮೂಲಕ ತಾತ್ವಿಕವಾಗಿಯೂ ನನ್ನನ್ನು ಹರಸಿದ್ದಾರೆ.
-ಡಾ.ಬಸವಮರುಳಸಿದ್ದ ಸಾಮೀಜಿ.

ಇಡೀ ಜಗತ್ತಿಗೆ ಭಾರತ ಆಧ್ಯಾತ್ಮಿಕ ಶಕ್ತಿ ಕೊಡುವಂತಹ ಕ್ಷೇತ್ರ. ಒಂದೊಂದು ಕಲ್ಲನ್ನು ಎಡವಿದರೂ ಸಹ ಒಂದೊಂದು ಶಿಲಾ ಶಾಸನ  ಜಿಲ್ಲೆಯಲ್ಲಿ ಸಿಗುತ್ತದೆ. ಅಂತಹ ಪವಿತ್ರವಾದ ನೆಲ ಶಿವಮೊಗ್ಗ .ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ ಬಸವ ನೆಲೆಗೆ ಭೂಮಿ ನೀಡಿದ್ದರು.ಆದಕ್ಕೆ ಇಂದು  ಸಂಸ್ಕಾರ ಸಿಕ್ಕಂತಾಗಿದೆ.ಅಲ್ಲದೆ ಈ ಜಾಗಕ್ಕೆ ಚಿನ್ಮಾ ಯಾನುಗ್ರಹ ದೀಕ್ಷೆಯ ಮೊದಲ ಕಾರ್ಯಕ್ರಮ ಆಗುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ.
-ಬಿ.ವೈ.ರಾಘವೇಂದ್ರ, ಸಂಸದ

ಚಿನ್ಮಯ ಎಂದರೆ ದೈವೀಕ, ದೀಕ್ಷೆ ಎಂದರೆ ಒಳ್ಳೆಯ ಸನ್ಮಾರ್ಗದಲ್ಲಿ ಹೋಗುವಂತಹದ್ದು, ಪಂಚಭೂತಗಳಿಂದ ಆದಂತಹ ಶರೀರಕ್ಕೆ ಒಂದು ಶಕ್ತಿಯನ್ನು ಕೊಡುವಂತಹ ದೀಕ್ಷೆಯೇ ಚಿನ್ಮಯಾನುಗ್ರಹ ದೀಕ್ಷೆ. ಜಂಗಮ ದೀಕ್ಷೆ ಪಡೆದಿದ್ದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದುಕೊಂಡಿದ್ದಾರೆ. ಅಕ್ಕಿಗೆ ಸಂಸ್ಕಾರ ಸಿಕ್ಕರೆ ಪ್ರಸಾದವಾಗುತ್ತದೆ. ನೀರಿಗೆ ಸಂಸ್ಕಾರ ಸಿಕ್ಕರೆ ತೀರ್ಥವಾಗುತ್ತದೆ.  ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಮಹಾದೇವನಾಗುತ್ತಾನೆ. ಆತ್ಮ ಪರಮಾತ್ಮನಲ್ಲಿ ವಿಲೀನವಾಗಲು.
ಈ ಪ್ರಕ್ರಿಯೆ ಆಗಬೇಕು.
-ಡಾ|| ಧನಂಜಯ ಸರ್ಜಿ, ವಿಧಾನ ಪರಿಷತ್ ಶಾಸಕ

ಮನುಷ್ಯ ತಾಯಿ ಹೊಟ್ಟೆಯಿಂದ ಬರುವಾಗ ಬೂತಿ ಆಗಿರುತ್ತಾನೆ. ಆತನಿಗೆ ಸಂಸ್ಕಾರ ಸಿಕ್ಕಾಗ ವಿಭೂತಿ ಆಗುತ್ತಾನೆ ಇದೀಗ ಬಸವ ಕೇಂದ್ರದ ಶ್ರೀಗಳಿಗೆ ದೀಕ್ಷೆಯ ಮೂಲಕಸಂಸ್ಕಾರ ಸಿಕ್ಕಿದ್ದು ಅದರಿಂದಾಗಿ ಅವರು ನಿರಂಜನಾನಂದ ಪ್ರಣವ ಸ್ವರೂಪಿ ಬಸವ ಮರಳುಸಿದ್ದ ಸ್ವಾಮೀಜಿಯಾಗಿ ಇಂದಿನಿಂದ ಹೊರಹೊಮ್ಮಿದ್ದಾರೆ.
-ಬೆಕ್ಕಿನಕಲ್ಮಠದ ಶ್ರೀಗಳು

Share This Article
";