ಅಂಗನವಾಡಿ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ : ಡಾ|| ಸರ್ಜಿ

Kranti Deepa

ಶಿವಮೊಗ್ಗ,ಅ.25 : ಅಂಗನವಾಡಿ ಕಾರ್ಯಕರ್ತೆಯರು ಚಿಕ್ಕ ಮಕ್ಕಳ ತಾಯಂದಿರಾಗಿ ಸೇವೆ ಒದಗಿಸುತ್ತಿ ದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಶ್ಲಾಘಿಸಿದರು.
ಜಿ.ಪಂ. ಸಭಾಂಗಣದಲ್ಲಿ ನಡೆದ ಮಕ್ಕಳ ಆರೋಗ್ಯ, ದೈಹಿಕ, ಮಾನಸಿಕ ಬೆಳವಣಿಗೆ, ಪಾಲನೆ-ಪೋಷಣೆ ಹಾಗೂ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ ಕುರಿತು ಅಂಗನವಾಡಿ ಕಾರ್ಯಕರ್ತೆ ಯರು, ಮೇಲ್ವಿಚಾರಕರಿಗೆ ಏರ್ಪಡಿಸಲಾ ಗಿದ್ದ ವರ್ಚುವಲ್ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ವೈದ್ಯರು ಜನರಿಗೆ ರೋಗ ಬಂದ ಮೇಲೆ ಚಿಕಿತ್ಸೆ ನೀಡುತ್ತಾರೆ. ಆದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ರೋಗ ಬರುವ ಮುನ್ನವೇ ಮಹಿಳೆಯರು- ಮಕ್ಕಳನ್ನು ಉಪಚರಿಸಿ ರೋಗ ಬಾರದಂತೆ ತಡೆಯುತ್ತಾರೆ. ಇವರು ನಿಜವಾದ ಸಮಾಜದ ವೈದ್ಯರು ಮತ್ತು ಸರ್ಕಾರ ಹಾಗೂ ಜನರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿ ಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗಿ ತಯಾರು ಮಾಡಬೇಕು. ನಿದ್ರೆಯಿಂದ ರೋಗ ಗುಣಪಡಿಸಬಹುದಾಗಿದ್ದು, ಉತ್ತಮ ನಿದ್ರೆ ಮಾಡಲು ಮಕ್ಕಳಿಗೆ ಅವಕಾಶ ನೀಡಬೇಕು.

ಆಯುಷ್ ಇಲಾಖೆಯ ಡಾ.ಜ್ಯೋತಿ ಲಕ್ಷ್ಮೀ ಮಾತನಾಡಿ, ಅಂಗನವಾಡಿ ಕಾರ್ಯ ಕರ್ತೆಯರು ದಿನ ನಿತ್ಯ ತಮ್ಮ ವೈಯಕ್ತಿಕ, ಸಾಂಸರಿಕ ಮತ್ತು ಅಂಗನವಾಡಿ ಕೆಲಸಗಳನ್ನು ನಿರ್ವಹಿಸಬೇಕಿದ್ದು ಮೂರು ದೋಣಿಗಳನ್ನು ನಡೆಸುವ ನಾವಿಕರಾಗಿರುತ್ತಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ಬಿ ಹೆಚ್ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜಿಲ್ಲಾ ಆಯುಷ್ ಅಕಾರಿ ಡಾ.ಲಿಂಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೂಪಣಾ ಕಾರಿ ಡಾ.ಸಂತೋಷ್ ಕುಮಾರ್, ಸಿಡಿಪಿಓಗಳು ಮುಂತಾದವರು ಪಾಲ್ಗೊಂಡಿದ್ದರು.

ಪ್ರತಿ ನಿಮಿಷಕ್ಕೆ 10 ಲಕ್ಷ ಪ್ಲಾಸ್ಟಿಕ್ ನೀರಿನ ಬಾಟಲ್ ಮಾರಾಟವಾಗುತ್ತಿದೆ. ನಾವು ಪ್ರತಿಯೊಬ್ಬರು 1 ವರ್ಷಕ್ಕೆ 1 ಎಟಿಎಂ ಕಾರ್ಡ್ನಷ್ಟು ಪ್ಲಾಸ್ಟಿಕ್ ಸೇವನೆ ಮಾಡುತ್ತಿದ್ದೇವೆ. ಎಲ್ಲೆಡೆ ಪ್ಲಾಸ್ಟಿಕ್‌ಮಯವಾಗಿದ್ದು ಇದನ್ನು ನಿಯಂತ್ರಿಸಬೇಕಿದೆ. ಪ್ರತಿ ವರ್ಷ ಕೇವಲ ಟಿಶ್ಯೂ ತಯಾರಿಸಲು 27 ಸಾವಿರ ಮರ ಮತ್ತು ಮನೆ ಕಟ್ಟಲು 3.36  ಲಕ್ಷ ಮರಗಳನ್ನು ಕಡಿಯಲಾಗುತ್ತಿದೆ. ಒಂದು ದೊಡ್ಡ ಮರ 10 ಜನರಿಗೆ ಆಮ್ಲಜನಕ ಒದಗಿಸುತ್ತದೆ. ಮಕ್ಕಳಿಗೆ ಗಿಡಗಳನ್ನು ಬೆಳೆಸುವುದನ್ನು ಕಲಿಸಬೇಕು. ಪರಿಸರ ಪ್ರಜ್ಞೆ ಬಿತ್ತಬೇಕು.
-ಡಾ.ಧನಂಜಯ ಸರ್ಜಿ,
ವಿಧಾನ ಪರಿಷತ್ ಶಾಸಕರು

Share This Article
";