Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

ಎಂ.ಕೆ.ಸುರೇಶ್ ಕುಮಾರ್ (ಚಾಲುಕ್ಯ ಸೂರಿ) ನಿಧನ

ಶಿವಮೊಗ್ಗ ,ಜು.03: ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ ,  ಕೋಟೆ ಶ್ರೀ ಮಾರಿಕಾಂಬ ಸಮಿತಿಯ ಉಪಾಧ್ಯಕ್ಷ ,ಹಿಂದೂ ಮಹಾಸಭಾ ಮಂಡಳದ ಅಧ್ಯಕ್ಷ ಎಂ.ಕೆ.ಸುರೇಶ್‌ಕುಮಾರ್(೬೫) ಶುಕ್ರವಾರ ಸಂಜೆ ನಿಧನರಾದರು.ನಗರದ ವಿನೋಬನಗರ ಬಡಾವಣೆ ನಿವಾಸಿಯಾದ ಇವರು, ಓ ಟಿ ರಸ್ತೆಯಲ್ಲಿ ಚಾಲುಕ್ಯ ಬಾರ್ ಅಂಡ್ ರೆಸ್ಟೋರೆಂಟ್‌ನ ಮಾಲೀಕರಾಗಿದ್ದರಿಂದ ಚಾಲುಕ್ಯ ಸೂರಿ ಎಂದೇ ಪ್ರಸಿದ್ದಿಯಾಗಿದ್ದರು.

ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಽಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದ ಇವರು ಕಾಂಗ್ರೆಸ್ ಮುಖಂಡರಾಗಿ ಪಕ್ಷದ ಸಂಘಟನೆಗೂ ಕೂಡ ಕೈ ಜೋಡಿಸಿದ್ದರು.

ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಇವರು, ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಎಲ್ಲರೊಂದಿಗೂ ಅತ್ಯಂತ ವಿಶ್ವಾಸದಿಂದ ಬೆರೆಯುತ್ತಿದ್ದರು.
ಶುಕ್ರವಾರ ಬೆಳಿಗ್ಗೆ ಕೋಟೆ ಶ್ರೀ ಮಾರಿಕಾಂಬ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತ ದ್ವಾರ ಸಮರ್ಪಣೆಯ ಸಂದರ್ಭದಲ್ಲಿ ಉಪಸ್ಥಿತರಿದ್ದು, ದೇವಿಗೆ ಪೂಜೆ ಸಲ್ಲಿಸಿದ್ದರು. ಸಭಾ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಮನೆಗೆ ತೆರಳಿದ್ದ ಸುರೇಶ್ ಕುಮಾರ್ ಸಂಜೆ ವೇಳೆಗೆ ಅಸ್ವಸ್ಥರಾಗಿ ಕೊನೆಯುಸಿರೆಳೆದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಸ್ನೇಹಿತ ವರ್ಗವನ್ನು ಅಗಲಿದ್ದಾರೆ.  ಇವರ ಪತ್ನಿ ಹಾಗೂ ಮಗಳು ವಿದೇಶದಲ್ಲಿದ್ದು, ಇವರು ಬಂದ ನಂತರ ಅಂತ್ಯ ಸಂಸ್ಕಾರ ನೆರವೇರಲಿದೆ.

ಇವರ ನಿಧನಕ್ಕೆ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸಂತಾಪ ಸೂಚಿಸಿ ಆತ್ಮಕ್ಕೆ ಶಾಂತಿ ಕೋರಿವೆ .ಸುರೇಶ್ ಕುಮಾರ್ ನಿಧನಕ್ಕೆ ಕ್ರಾಂತಿದೀಪ ಬಳಗ ತೀವ್ರ ಕಂಬನಿ ಮಿಡಿದಿದೆ.

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST