Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

ಭದ್ರಾವತಿ : ಉಪ್ಪಾರ ಸಮಾಜದ ಮುಖಂಡರಾದ ಕೆ.ಕೃಷ್ಣಪ್ಪ ನಿಧನ

ಭದ್ರಾವತಿ,ಜೂ.25 : ನಗರದ ಉಪ್ಪಾರ ಸಮಾಜದ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಕೆ .ಕೃಷ್ಣಪ್ಪ (83 ) ಇಂದು ನಿಧನರಾದರು.

ಮೃತರು ಗುರುವಾರ ಮಧ್ಯಾಹ್ನ ದ್ವಿಚಕ್ರವಾಹನದಲ್ಲಿ ತಮ್ಮ ತೋಟಕ್ಕೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಇವರು ಭದ್ರಾವತಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘದ ಪದಾಕಾರಿಗಳಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಜನಾನುರಾಗಿಯಾಗಿದ್ದರು.

ಇವರು ಇಬ್ಬರು ಪುತ್ರರು ಐವರು ಪುತ್ರಿಯರು ಸೇರಿದಂತೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ  ಇಂದು ಮಧ್ಯಾಹ್ನ ಬೈಪಾಸ್ ರಸ್ತೆ ವಿಶ್ವೇಶ್ವರಯ್ಯ ನಗರದಲ್ಲಿ  ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ : ಇವರ ನಿಧನಕ್ಕೆ ಭದ್ರಾವತಿ ತಾಲೂಕು ಉಪ್ಪಾರ ಸಂಘದ ಪದಾಕಾರಿಗಳು ಹಾಗೂ ಶಿವಮೊಗ್ಗ ಭಗೀರಥ ಸಹಕಾರ ಸಂಘದ ಆಡಳಿತ ಮಂಡಳಿಯವರು ತೀವ್ರ ಸಂತಾಪ ಸೂಚಿಸಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕ್ರಾಂತಿದೀಪ ಬಳಗ ಇವರ ನಿಧನಕ್ಕೆ ಸಂತಾಪ ಸೂಚಿಸಿದೆ.

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST