Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

ಲಾಫಿಂಗ್ ಬುದ್ಧ ಪೊಲೀಸರೂ ಮನುಷ್ಯರೆನ್ನುವ ಸಿನಿಮಾ

ಶಿವಮೊಗ್ಗ: ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಪೊಲೀಸರು ಒಳ್ಳೆಯವರಿದ್ದಾರೆ. ಅವರು ಕೂಡ ಮನುಷ್ಯರು ಎಂದು ಹೇಳುವ ಪ್ರಯತ್ನ ಮಾಡಲಾಗಿದೆ. ರಿಷಬ್ ಶೆಟ್ಟಿ ಪ್ರೊಡಕ್ಷನ್‌ನಲ್ಲಿ ಮೂಡಿಬಂದ 6 ನೇ ಸಿನಿಮಾ ಇದಾಗಿದೆ. ನಗುವಿಗಾಗಿ ಮಾಡಿದ ಸಿನಿಮಾ ಲಾಫಿಂಗ್ ಬುದ್ಧ ಆಗಿದೆ ಎಂದು ನಟ ಪ್ರಮೋದ್ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕೃಷ್ಣಂ ಪ್ರಣಯಸಖಿ, ಭೀಮಾ ಹಾಗೂ ಲಾಫಿಂಗ್ ಬುದ್ಧ ಈ ಮೂರು ಸಿನಿಮಾಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿವೆ. ಪ್ರೊಡ್ಯೂಸರ್ ಉಸಿರಾಡುವಂತೆ ಮಾಡಿದೆ. ನಟ ಶಶಿಕುಮಾರ್ ಕಾಲದಲ್ಲಿ ಪೊಲೀಸರ ಸಿನಿಮಾ ಬಂದಿತ್ತು, ಪೊಲೀಸರ ಹೆಂಡ್ತಿ, ಇಬ್ಬರ ಹೆಂಡತಿ ಮುದ್ದಿನ ಪೋಲೀಸ್ ರಿಲೀಸ್ ಆಗಿತ್ತು. ಇದಾದ ನಂತರ ಪೊಲೀಸರ ಬಗ್ಗೆ ಯಾವ ಸಿನಿಮಾ ಮೂಡಿಬಂದಿಲ್ಲ. ಲಾಫಿಂಗ್ ಬುದ್ಧ ಉತ್ತಮ ಸಿನಿಮಾವಾಗಿದೆ. ಗೋವರ್ಧನ ಕ್ಯಾರೆಕ್ಟರ್‌ನ್ನು ತಾನು ಮಾಡಿದ್ದೇನೆ. ಮನೆ ಮತ್ತು ಕಚೇರಿಯನ್ನು ಲವಲವಿಕೆ ವಾತಾವರಣದಿಂದ ಇಡುವ ಕಾನ್ಸ್‌ಟೇಬಲ್ ಪಾತ್ರ ಮಾಡಿದ್ದೇನೆ ಎಂದರು.

ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ ಇದಾಗಿದೆ. ಆರಂಭದಲ್ಲಿ ೧೦೦ ಚಲನಚಿತ್ರದ ಮಂದಿರದಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈಗ 150 ಚಲನಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿದೆ. ನಿರ್ಮಾಪಕರಿಗೆ ಉತ್ತಮ ಸಂಪಾದನೆ ಮಾಡಿಕೊಟ್ಟಿದೆ ಎಂದರು.

ಜಲಂಧರ್, ಶಭಾಸ್ ಬಡ್ಡಿಮಗನೆ, ಸಾಗರದಲ್ಲಿ ಶೂಟ್ ಮಾಡಿರುವ ಅಧಿಕಪ್ರಸಂಗ, ಸಪೋರ್ಟಿಂಗ್ ಕ್ಯಾರೆಕ್ಟರ್‌ನಲ್ಲಿ ಬಗೀರ, ಚೀತಾ, ಶೇಷಾ, ತಮಿಳಿನಲ್ಲೂ ಅಭಿನಯಿಸಿರುವೆ. ಅಣ್ಣಯ್ಯ ಎಂಬ ಸೀರಿಯಲ್ ನ್ನೂ ಪಾತ್ರವಹಿಸಿರುವೆ ಎಂದು ಪ್ರಮೋದ್ ಶೆಟ್ಟಿ ತಿಳಿಸಿದರು.

ನಿರ್ದೇಶಕ ಭರತ್‌ರಾಜ್ ಮಾತನಾಡಿ, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೆಚ್ಚು ಜನಕ್ಕೆ ತಲುಪಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಎರಡು ಕಾಲುಗಂಟೆ ಸಿನಿಮಾ ಇದಾಗಿದೆ. ಲಾಫಿಂಗ್ ಬುದ್ದ ಸಿನಿಮಾ ಗೋವರ್ಧನ್ ಎಂಬ ಪೊಲೀಸ್ ಕಾನ್ ಸ್ಟೇಬಲ್ ನ ಕಥೆ ಇದು.ತಿಳಿಹಾಸ್ಯದ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿ ಹೇಳುವ ಚಿತ್ರ ಇದಾಗಿದೆ ಎಂದರು.

ಲಾಫಿಂಗ್ ಬುದ್ಧ ನಗುತ್ತಿದ್ದ ಸನ್ಯಾಸಿಯಾಗಿದ್ದಾನೆ. ಅದೇ ಕಾನ್ಸೆಪ್ಟ್‌ನಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಇರುತ್ತಾನೆ. ಪ್ರಮೋದ್ ಶೆಟ್ಟಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಕುತೂಹಲವಿದೆ. ರಂಗಭೂಮಿಯಿಂದ ಬಂದ ಕಾರಣ ಸ್ನೇಹಬಳಸಿಕೊಳ್ಳುವುದು ಅವರಿಗೆ ಕರಗತವಾಗಿದೆ. ಲಾಫಿಂಗ್ ಬುದ್ಧ್ದನನ್ನು ಭದ್ರಾವತಿ, ಸಾಗರದಲ್ಲಿ ಶೂಟಿಂಗ್ ನಡೆಸಲಾಗಿದೆ. ಸ್ಥಳೀಯ ಕಲಾವಿದರನ್ನೂ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿರ್ಮಾಪಕ ಭರತ್ ತಿಳಿಸಿದರು.

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST