Advertisement
ಜಿಲ್ಲೆರಾಜ್ಯರಾಷ್ಟ್ರೀಯರಾಜಕೀಯಮಹಿಳೆಕೃಷಿಅಂಕಣಸಿನಿಮಾಸಾಹಿತ್ಯ್ಶಿಕ್ಷಣಕ್ರೀಡೆಕ್ರೈಂ

9 ಸಾವಿರ ರನ್ ಪೂರೈಸಿದ ಕೊಹ್ಲಿ

ಬೆಂಗಳೂರು,ಅ.18 : ವಿರಾಟ್ ಕೊಹ್ಲಿ  ಈ ಪಂದ್ಯದಲ್ಲಿ  221 ನೇ ಬಾರಿಗೆ 50 + ರನ್ ದಾಖಲಿಸಿದರು. ಅದೇ ಸಮಯದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ  9 ಸಾವಿರ ರನ್ ಸಹ ಪೂರೈಸಿದರು.

ಈ ಮೂಲಕ ಭಾರತ ಪರ ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಒಂದೇ ದಿನ 453 ರನ್, ದಾಖಲೆ ಬರೆದ ಚಿನ್ನಸ್ವಾಮಿ ಕ್ರೀಡಾಂಗಣ

ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮೊದಲ ದಿನ ಮಳೆಯಿಂದಾಗಿ ಸುದ್ದಿಯಾದರೆ, 3 ನೇ ದಿನ ರನ್‌ಗಳ ಸುರಿಮಳೆಯಿಂದ ಸುದ್ದಿಗೆ ಗ್ರಾಸವಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3 ನೇ ದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ರನ್ ಗಳು ಹರಿದು ಬಂದಿದೆ.

ನಿನ್ನೆ 2 ನೇ ದಿನದಾಟದ ಅಂತ್ಯಕ್ಕೆ 180 ರನ್ ಗಳಿಸಿದ್ದ ನ್ಯೂಜಿಲೆಂಡ್ ಇಂದು 222 ರನ್ ಸೇರಿಸಿತು. ಅಂತೆಯೇ ಭಾರತ ಕೂಡ ಶುಕ್ರವಾರ ತನ್ನ 2 ನೇ ಇನ್ನಿಂಗ್ಸ್‌ನಲ್ಲಿ 231 ರನ್ ಕಲೆಹಾಕಿತು.

ಆ ಮೂಲಕ ಇಂದು ಒಂದೇ ದಿನ ಉಭಯ ತಂಡಗಳಿಂದ ಬರೊಬ್ಬರಿ 453 ರನ್ ಗಳು ಹರಿದು ಬಂದಿದೆ.

Author
Kranti Deepa
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST