ಶಿವಮೊಗ್ಗ,ನ.04 : ಆನಂದಪುರ ಸಮೀಪದ ಗಿಳಾಲಗುಂಡಿಯಲ್ಲಿರುವ ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಕೊಣೆಹೊಸೂರಿನ ನಿವಾಸಿ ಗಾಯತ್ರಮ್ಮ (55 ) ಮೃತರು. ಸಂಜೆಯಾದರೂ ಅಮ್ಮ ಮನೆಗೆ ಬಾರದಿದ್ದಾಗ ಕೆರೆಯ ಬಳಿ ಹುಡುಕಾಡಿದ್ದಾರೆ. ಆಗ ಚಪ್ಪಲಿ ಹಾಗೂ ತೊಳೆಯಲು ತೆಗೆದುಕೊಂಡು ಹೋಗಿದ್ದ ಬಟ್ಟೆಗಳು ಕಂಡುಬಂದಿವೆ. ಅನುಮಾನಗೊಂಡ ಮಕ್ಕಳು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕದಳವರು ಕೆರೆಯಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.