ಶಿವಮೊಗ್ಗ,ನ.06: ಶಿರಾಳಕೊಪ್ಪ ಪಟ್ಟಣದ ನೆಹರೂ ಕಾಲೊನಿ ವ್ಯಾಪಾರಿಯೊಬ್ಬರು ಅನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ 34.61 ಲಕ್ಷ ಕಳೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಾಪಾರಿ ಮೊಬೈಲ್‌ಗೆ ಬ್ಯಾಂಕ್‌ನ ಹೆಸರು ಇರುವ ಡಾಟ್ ಎಪಿಕೆ ಎಂಬ ಫೈಲ್‌ನ ಲಿಂಕ್ ಬಂದಿದೆ. ಬ್ಯಾಂಕ್‌ನ ಹೆಸರು ಇದ್ದುದರಿಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ.
ಆಗ ವಂಚಕರು ಅವರ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ವ್ಯಾಪಾರಕ್ಕಾಗಿ ಸಾಲ ಮಾಡಿದ್ದ ಅವರು ಉಳಿತಾಯ ಖಾತೆಯಲ್ಲಿ ಆ ಹಣ ಇಟ್ಟುಕೊಂಡಿದ್ದರು.
ಖಾತೆಯಿಂದ ಮೊದಲು 3,61,469 ಮತ್ತು ನಂತರ 74,000 ಮೊತ್ತ ಕಡಿತಗೊಂಡಿದೆ.
ಈ ಕುರಿತು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.