ತೀರ್ಥಹಳ್ಳಿ : ಅನಾರೋಗ್ಯ ಬೇಸತ್ತ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಜಿಗಳಗೊಡು ಸಮೀಪದ ಯೋಗಿ ನರಸೀಪುರ ಗ್ರಾಮದ ಸಿದ್ದಪ್ಪ (56) ಶನಿವಾರ ಬೆಳಗಿನ ಜಾವ ಮನೆ ಪಕ್ಕದಲ್ಲಿ ಇದ್ದಂತಹ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವ್ಯವಸಾಯ ಮಾಡಿಕೊಂಡಿದ್ದ ಸಿದ್ದಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಓರ್ವ ಪುತ್ರ ಹಾಗೂ ಪುತ್ರಿ ಹೊರಗಡೆ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಇವರ ಜೊತೆಗೆ ಪತ್ನಿ ಮಾತ್ರ ಇದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ದೇಹ ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ರವಾನಿಸಲಾಗಿದೆ.