ಸುದ್ದಿ ಪ್ರಕಟಿಸುವಾಗ ಮಾಧ್ಯಮಗಳು ಎಚ್ಚರ ವಹಿಸಬೇಕು : ಸುಪ್ರೀಂ

Kranti Deepa
ನವದೆಹಲಿ,ಫೆ.19 : ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಯಾವುದೇ ಹೇಳಿಕೆಗಳು, ಸುದ್ದಿಗಳು ಅಥವಾ ಅಭಿಪ್ರಾಯಗಳನ್ನು ಪ್ರಕಟಿಸುವ ಮೊದಲು ಅತ್ಯಂತ ಎಚ್ಚರಿಕೆ ಮತ್ತು ಜವಾಬ್ದಾರಿ ಯನ್ನು  ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಮಾಧ್ಯಮದ ಶಕ್ತಿ ಮಹತ್ವದ್ದಾಗಿದೆ. ಸಾರ್ವಜನಿಕ ಭಾವನೆಗಳನ್ನು ಪ್ರಭಾವಿಸುವ ಮತ್ತು ಗಮನಾರ್ಹ ವೇಗದಲ್ಲಿ ಗ್ರಹಿಕೆಗಳನ್ನು ಬದಲಾಯಿಸುವ ಸಾಮ ರ್ಥ್ಯವನ್ನು ಪತ್ರಿಕೆ ಹೊಂದಿದೆ ಎಂದು ನ್ಯಾಯ ಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು ಪುನರುಚ್ಚರಿಸಿತು.
ಬಿಡ್ ಮತ್ತು ಹ್ಯಾಮರ್ ಹರಾಜಿಗಿಡಲಿರುವ ಕೆಲವು ವರ್ಣಚಿತ್ರಗಳ ದೃಢೀಕರಣದ ಮೇಲೆ ಮಾನನಷ್ಟ  ಸಂಬಂತ ಸುದ್ದಿಯನ್ನು  ಪ್ರಕಟಿಸಲಾ ಗಿದೆ ಎಂದು ಆರೋಪಿಸಿ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕೀಯ ನಿರ್ದೇಶಕರು ಮತ್ತು ಇತರ ಪತ್ರಕರ್ತರ ವಿರುದ್ಧ ದಾಖಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ  ಪೀಠ ಈ ಮಾತುಗಳನ್ನು ಹೇಳಿದೆ.

Share This Article
";