ಶಿವಮೊಗ್ಗ: ವಿನೋಬನಗರದ ವೀರಣ್ಣ ಲೇಔಟ್ ನಲ್ಲಿ ಮಹಿಳೆಯೋರ್ವರು ಮನೆಯಲ್ಲಿದ್ದಾಗ ಮನೆಯ ಬಾಗಿಲು ಬಡಿದ ಇಬ್ಬರು ಅಪರಿಚಿತರು ನಾವು ನಿಮ್ಮ ಮನೆಯ ದೇವರುಗಳನ್ನು ಹೊಳೆಯುವಂತೆ ಮಾಡಿಕೊಡುವುದಾಗಿ ಹೇಳಿ, ಮಹಿಳೆ ನಿರಾಕರಿಸಿದಾಗ ಚಾಕು ತೆಗೆದು ಹೆದರಿಸಿ ಆಭರಣ ಪಡೆದುಕೊಂಡು ಪರಾರಿಯಾದ ಘಟನೆ ಸಂಭವಿಸಿದೆ.
ಈ ಅಪರಿಚಿತರು ಪಾತ್ರೆಯನ್ನು ಹೊಳೆಯುವಂತೆ ಮಾಡಿಕೊಡುವುದಾಗಿ ಮಹಿಳೆಯನ್ನು ನಂಬಿಸಲೆತ್ನಿಸಿದರು. ಆದರೂ ಆಕೆ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ಇನ್ನೊಬ್ಬ ಮಹಿಳೆಗೆ ನೇರವಾಗಿ ಚಾಕು ತೋರಿಸಿ ಕೈಯಲ್ಲಿರುವ ಚಿನ್ನಾಭರಣವನ್ನು ತೆಗೆದುಕೊಡು ಎಂದಿದ್ದಾನೆ. ಮಹಿಳೆ ಹೆದರಿ ಪ್ರತಿರೋಧ ತೋರದೆ ಬಳೆ ತೆಗೆದುಕೊಟ್ಟಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ.
ಮಹಿಳೆ ಮನೆಯಲ್ಲಿ ಒಂಟಿಯಾಗಿರುವುದನ್ನು ಅರಿತವರು ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಗಿದೆ. ಈಕೆಗೆ ಇಬ್ವರು ಮಕ್ಕಳಿದ್ದು ಒಬ್ಬ ಬೆಂಗಳೂರಿನಲ್ಲಿ ಮತ್ತೋರ್ವ ಚಿತ್ರದುರ್ಗದಲ್ಲಿದ್ದಾನೆ. ಚಿತ್ರದುರ್ಗದಲ್ಲಿರುವ ಮಗ ಆಗಾಗ್ಗೆ ಶಿವಮೊಗ್ಗಕ್ಕೆ ಬಂದು ಹೋಗುತ್ತಿರುತ್ತಾನೆ. ಘಟನೆ ನಂತರ ಮಗನಿಗೆ ವಿಷಯ ತಿಳಿಸಿದಾಗ ಆತ ಧಾವಿಸಿ ನಂತರ ಮಹಿಳೆ ವಿನೋಬ ನಗರ ಠಾಣೆಗೆ ದೂರು ನೀಡಿದ್ದಾರೆ.