ಭೋಪಾಲ್,ಜ.1 : ಜಗತ್ತಿನಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ 2025 ರಲ್ಲಿ ಬರೋಬ್ಬರಿ 166 ಹುಲಿಗಳು ಸಾವಿಗೀಡಾಗಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಇತ್ತೀಚಿನ ವರದಿ ಹೇಳಿದೆ.
2024 ಹುಲಿಗಳ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ, 2025 ರಲ್ಲಿ 40 ಹುಲಿಗಳಿಗೂ ಅಧಿಕ ಸಾವಿಗೀಡಾಗಿವೆ. 2024 ರಲ್ಲಿ ಇದರ ಸಂಖ್ಯೆ 126 ಇತ್ತು. ಭಾರತದ ‘ಹುಲಿಗಳ ರಾಜ್ಯ’ ಎಂದು ಕರೆಯಲ್ಪಡುವ ಮಧ್ಯಪ್ರದೇಶವೊಂದರಲ್ಲೇ ಅತೀ ಹೆಚ್ಚು ( 55 ) ಹುಲಿಗಳು ಸಾವಿಗೀಡಾಗಿವೆ. ಮಹಾರಾಷ್ಟ್ರ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ನಂತರದ ಸ್ಥಾನದಲ್ಲಿದ್ದು, ಕ್ರಮವಾಗಿ 38, 13 ಮತ್ತು 12 ಹುಲಿಗಳು ಸಾವಿಗೀಡಾಗಿವೆ.
ಸಾವಿಗೀಡಾಗಿರುವ 166 ಹುಲಿಗಳ ಪೈಕಿ 31 ಮರಿಗಳು ಇರುವುದು ಕಳವಳಕಾರಿ ಅಂಶವಾಗಿದೆ.
