ಹೊನ್ನಾಳಿ,ಸೆ.2 :ತನ್ನ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಬೇಕು ಎಂಬ ಒತ್ತಾಸೆಯಿಂದ ಅನೇಕ ವರ್ಷಗಳ ಕಾಲ ಹೋರಾಟ ಮಾಡಿ ಪ್ರತಿಸಲ ಕಂಡು ಕೆಲವೇ ಹೊತ್ತಿನಲ್ಲಿ ಹೋರಾಟಗಾರ ಇಹಲೋಕ ತ್ಯಜಿಸಿದ ಘಟನೆ ತಾಲ್ಲೂಕಿನ ಬಳ್ಳೇಶ್ವರದಲ್ಲಿ ನಡೆದಿದೆ.
ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ತನ್ನ ಗ್ರಾಮಕ್ಕೆ ಬಸ್ ಸೌಕರ್ಯವನ್ನ ಕಲ್ಪಿಸಿಕೊಟ್ಟು ಬೇಡಿಕೆ ಈಡೇರಿದ ಕೆಲವೇ ಹೊತ್ತಿನಲ್ಲಿ ನಿಧನರಾದ ಘಟನೆ ಅತ್ಯಂತ ವಿಪರ್ಯಾಸವೆನಿಸಿದರು ಸತ್ಯವೂ ಆಗಿದೆ.
ಹೌದು ತಾಲೂಕು ಕೇಂದ್ರದಿಂದ ಕೆಲವೇ ಕಿಲೋಮೀಟರ್ ದೂರಗಳ ಅಂತರದಲ್ಲಿರುವ ಪ್ರೇಕ್ಷಣೀಯ ಸ್ಥಳವೂ ಆಗಿರುವ ತಾಲೂಕಿನ ಬಳ್ಳೇಶ್ವರ ಎಂಬ ಗ್ರಾಮ ಹಲವು ವರ್ಷಗಳಿಂದ ಬಸ್ ಸೌಕರ್ಯವಿಲ್ಲದೆ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಬಸ್ ಸೌಕರ್ಯಕ್ಕಾಗಿ ರೈತಸಂಘದ ಮುಖಂಡರು ಆಗಿದ್ದ ಬಿ.ಆರ್.ಷಣ್ಮುಖಪ್ಪ ಅನೇಕ ಬಾರಿ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಸಂಬಂಧಪಟ್ಟ ಜನಪ್ರತಿನಿಗಳು, ಸಚಿವರಿಗೂ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವಿಚಾರದಲ್ಲಿ ತಮ್ಮ ಹೋರಾಟವನ್ನು ಷಣ್ಮುಖಪ್ಪ ಕೈ ಬಿಡಲಿಲ್ಲ ಸ್ಥಳೀಯ ಶಾಸಕ ಶಾಂತನಗೌಡರವರನ್ನ ಬೆನ್ನು ಹತ್ತಿದ ಅವರು ಗ್ರಾಮಕ್ಕೆ ಬಸ್ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅದರ ಪರಿಣಾಮ ಇಂದು ಬೆಳಗ್ಗೆ ಗ್ರಾಮದಿಂದ ತಾಲೂಕು ಕೇಂದ್ರಕ್ಕೆ ಬಸ್ ಸೌಕರ್ಯವನ್ನು ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ನೆರವೇರಿಸಲಾಯಿತು.
ಗ್ರಾಮಸ್ಥರು ಸಂತಸಪಟ್ಟರು. ಇಡೀ ಗ್ರಾಮದಲ್ಲಿ ಸಂತೋಷದ ವಾತಾವರಣ ಏರ್ಪಟ್ಟಿತ್ತು. ಆದರೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಷಣ್ಮುಖಪ್ಪ ಅವರು ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಹೃದಯಘಾತಕ್ಕೆ ಒಳಗಾದರು. ಕೂಡಲೇ ಗ್ರಾಮಸ್ಥರು ಮನೆಯವರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ತಪಾಸಣೆ ನಡೆಸಿದ ವೈದ್ಯರು ಷಣ್ಮುಖಪ್ಪ (೫೭) ಮೃತಪಟ್ಟಿದ್ದಾರೆ ಎಂದು ಹೇಳಿದರು. ಸಂಭ್ರಮ ಮನೆಮಾಡಿದ್ದ ಗ್ರಾಮದಲ್ಲಿ ದುಃಖದ ಕಾಮೋಡ ಆವರಿಸಿತು.
ಹೋರಾಟಗಾರನ ಸಾವಿಗೆ ಇಡೀ ಗ್ರಾಮವೇ ಮಮ್ಮಲ ಮರುಗಿತು. ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದು, ವೃತರ ಅಂತ್ಯಸಂಸ್ಕಾರ ಗ್ರಾಮದಲ್ಲಿ ಸೋಮವಾರ ಸಂಜೆ ನೆರವೇರಿತು ಅಂತ್ಯಸಂಸ್ಕಾರದಲ್ಲಿ ಶಾಸಕ ಶಾಂತನಗೌಡ, ಮಾಜಿ ಶಾಸಕ ಹಾಗೂ ಸಚಿವ ಎಂ ಬಿ ಎಂ ಪಿ ರೇಣುಕಾಚಾರ್ಯ, ರೈತ ಸಂಘದ ಮುಖಂಡರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.