ಶಿವಮೊಗ್ಗ,ನ.20 : ಹೊಸನಗರ ತಾಲ್ಲೂಕು ಚಿಕ್ಕಮಣತಿ ಗ್ರಾಮದಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಯೊಬ್ಬ ಪರೀಕ್ಷೆಯ ಭಯದಿಂದ ಕಳೆನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನುದೀಪ್ ಮೃತ ವಿದ್ಯಾರ್ಥಿ. ಈತನಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಈತನಿಗೆ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದರು.
ಈ ನಡುವೆ ನ. 15 ರಂದು ವಿದ್ಯಾರ್ಥಿಯು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದನ್ನು ನೋಡಿದ ಒಬ್ಬರು ವಿಚಾರಿಸಿದ್ದಾರೆ. ಅವರಿಗೆ ತಾನು ಕಳೆನಾಶಕ ಸೇವಿಸಿರುವುದಾಗಿ ವಿದ್ಯಾರ್ಥಿ ಹೇಳಿದ್ದ.
ತಕ್ಷಣವೇ ಆತನನ್ನು ಆಸ್ಪತ್ರೆಗೆ ರವಾನಿಸಿ, ಅಲ್ಲಿಂದ ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ. ಪರೀಕ್ಷೆಯ ಭಯಕ್ಕೆ ಹೀಗೆ ಮಾಡಿಕೊಂಡಿದ್ದಾಗಿ ವಿದ್ಯಾರ್ಥಿಯು ಹೇಳಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.