ಶಿಕಾರಿಪುರ, ಫೆ. 27 : ಜಾನುವಾರುಗಳನ್ನು ಕಳ್ಳತನಗೈಯುತ್ತಿದ್ದ ಶಿಕಾರಿಪುರದ ಗ್ಯಾಂಗ್ ನ್ನು ಹಾವೇರಿ ಜಿಲ್ಲೆ ಬಂಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಕವಾಸಪೂರ ಗ್ರಾಮದ ದಾದಾಪೀರ್ (35) ಅಬ್ದುಲ್ ಸತ್ತಾರ (38) ಬಂಧಿತರು.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬುಲೆರೋ ಪಿಕ್ ಅಪ್ ವಾಹನ ಮತ್ತು ಕಳ್ಳತನ ಮಾಡಿದ್ದ ಮೂರು ಎತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಒಟ್ಟು ಮೌಲ್ಯ ರೂ. 7,50,000/- ಎಂದು ಅಂದಾಜಿಸಲಾಗಿದೆ.
ದಿನಾಂಕ 22-2-2025ರಂದು ರಾತ್ರಿ, ಬಂಕಾಪುರದ ಕಲ್ಯಾಣ ಗ್ರಾಮದ ಮನೆಯೊಂದರ ಶೆಡ್‌ನಲ್ಲಿ ಕಟ್ಟಿದ್ದ ಒಂದು ಎತ್ತನ್ನು, ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿದ್ದ, ಬಂಕಾಪುರ ಠಾಣೆ ಪೊಲೀಸರಿಗೆ, ದಿನಾಂಕ 26-2-2025ರಂದು ಬಾಡ ಗ್ರಾಮದ, ಅರಮನೆ ಹತ್ತಿರ, ನಂಬರ್ ಪ್ಲೇಟ್ ಇಲ್ಲದೆ, ಒಂದು ಎತ್ತನ್ನು ತುಂಬಿಕೊಂಡು ಬಂದ ಬುಲೆರೋ ವಾಹನ ಅನುಮಾನಾಸ್ಪದವಾಗಿ ಕಂಡು ಬಂದಿತ್ತು.
ತಕ್ಷಣ ವಾಹನದಲ್ಲಿದ್ದವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಎತ್ತುಗಳ ಕಳ್ಳನನದ ಬಗ್ಗೆ ಒಪ್ಪಿಕೊಂಡಿದ್ದಾರೆ. ಅವರು ನೀಡಿದ ಮಾಹಿತಿ ಮೇಲೆ ಕಲ್ಯಾಣ ಗ್ರಾಮದಲ್ಲಿ ಕದ್ದಿದ್ದ ಒಂದು ಎತ್ತು ಮತ್ತು ಅಗಡಿ ಗ್ರಾಮದಲ್ಲಿ ಕದ್ದಿದ್ದಎರಡು ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ತಲೆಮರೆಸಿಕೊಂಡಿರುವ, ಮತ್ತೆ ಮೂವರ ಪತ್ತೆಕಾರ್ಯ ಮುಂದುವರೆದಿದೆ.