ನವದೆಹಲಿ,ಆ.28 :ಭಾರತದಲ್ಲಿ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಮೀರಿದ್ದು, ಅತ್ಯಂತ ಶುಚಿ ಯಾದ ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಪಡಿ ಸಿದರೆ ಭಾರತೀಯರು 9.4 ತಿಂಗಳು ಹೆಚ್ಚು ಬದುಕಬಹುದು ಎಂದು ವರದಿಯೊಂದು ಹೇಳಿದೆ.
ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ 2025 ರ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಅಪಾಯಕಾರಿ ಪಿಎಂ 2.5 ರಷ್ಟು ಸಾಂಧ್ರತೆಯ ದೂಳಿನ ಕಣವು 2022 ನೇ ಸಾಲಿಗೆ ಹೋಲಿಸಿದಲ್ಲಿ 2023 ರಲ್ಲಿ ಹೆಚ್ಚಳವಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತಲೂ ಎಂಟು ಪಟ್ಟು ಅಕವಾಗಿದೆ. ಇದರ ಪರಿಣಾಮ ಭಾರತೀಯರ ಜೀವಿತಾವಯು 3.5 ವರ್ಷ ಕಡಿತಗೊಳ್ಳಲಿದೆ ಎಂದು ವರದಿ ಹೇಳಿದೆ.
2021 ರ ಗಾಳಿಯ ಗುಣಮಟ್ಟ ಮಾರ್ಗಸೂಚಿಯ ಪ್ರಕಾರ, ದೂಳಿನ ಕಣ ಪಿಎಂ 2.5 ಗಾತ್ರದ ವಾರ್ಷಿಕ ಮಿತಿ ಪ್ರತಿ ಕ್ಯುಬಿಕ್ ಮೀಟರ್‌ಗೆ 5 ಮೈಕ್ರೊ ಗ್ರಾಂ ಮಾತ್ರ. ಹಾಗೆಯೇ ಪಿಎಂ 10 ರದ್ದು 15 ಮೈಕ್ರೊ ಗ್ರಾಂ. ಆದರೆ ಭಾರತದ ಮಾನದಂಡವು ಭಿನ್ನವಾಗಿದ್ದು, ಪಿಎಂ 2.5 ಮಿತಿಯು ವಾರ್ಷಿಕ 40 ಮೈಕ್ರೊಗ್ರಾಂ ಮತ್ತು ಪಿಎಂ10 ದೂಳಿನ ಕಣದ್ದು 60 ಮೈಕ್ರೊಗ್ರಾಂನಷ್ಟಿದೆ.
ವಾಸ್ತವದಲ್ಲಿ ದೇಶದ ಶೇ 46 ರಷ್ಟು ಜನಸಂಖ್ಯೆಯು ಪಿಎಂ2.5 ಮಟ್ಟವು ರಾಷ್ಟ್ರೀಯ ಮಾನದಂಡವಾದ 40 ಮೈಕ್ರೊ ಗ್ರಾಂಗಿಂತಲೂ ಅಕವಾಗಿರುವ ಪ್ರದೇಶಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಒಂದೊಮ್ಮೆ ಸೂಚಿಸಿದ ಗುಣಮಟ್ಟಕ್ಕೆ ಮಾಲಿನ್ಯ ನಿಂತ್ರಿಸಿದರೆ ಜನರ ಜೀವಿತಾವ 1.5 ವರ್ಷ ಹೆಚ್ಚಳವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅತಿ ಹೆಚ್ಚು ಮಾಲಿನ್ಯಗೊಂಡಿರುವ ಉತ್ತರ ಪ್ರಸ್ತಭೂಮಿಯ 54 ಕೋಟಿ ಜನರ (ಶೇ 38 ರಷ್ಟು) ಜೀವಿತಾವಧಿ 5 ವರ್ಷ ಹೆಚ್ಚಳವಾಗಲಿದೆ ಎಂದು ಈ ವರದಿ ಹೇಳಿದೆ.
ಒಂದೊಮ್ಮೆ ಇಡೀ ಭಾರತವೇ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಗಾಳಿಯ ಗುಣಮಟ್ಟವನ್ನು ಕಾಪಾಡಿಕೊಂಡಿದ್ದೇ ಆದಲ್ಲಿ ಜೀವಿತಾವಧಿಯು 8.2 ವರ್ಷಗಳಷ್ಟು ಹೆಚ್ಚಾಗಲಿದೆ ಎಂದೂ ಈ ವರದಿ ಸಲಹೆ ನೀಡಿದೆ.