ಸಿಂಗಪುರ,ಡಿ.13 :ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ 14 ನೇ ಪಂದ್ಯದಲ್ಲಿ ಭಾರ ತದ ಚಾಲೆಂಜರ್ ಡಿ.ಗುಕೇಶ್ ಅವರು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಪರಾಭವಗೊಳಿಸುವ ಮೂಲಕ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
18 ವರ್ಷ ವಯಸ್ಸಿನ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಮತ್ತು 32 ವರ್ಷ ವಯಸ್ಸಿನ ಹಾಲಿ ಚಾಂಪಿಯನ್ ಲಿರೆನ್ ನಡುವೆ ನಡೆದ 13 ಪಂದ್ಯಗಳು ಡ್ರಾ ಆಗಿದ್ದವು. ಆ ಮೂಲಕ ಇಬ್ಬರೂ ತಲಾ 6.5 ಅಂಕಗಳೊಂದಿಗೆ ಸಮಬಲ ಸಾಸಿದ್ದರು.
ಇಂದು ನಡೆದ ಕೊನೆಯ ಪಂದ್ಯದಲ್ಲಿ ಲಿರೆನ್ ವಿರುದ್ಧ ಗುಕೇಶ್ ಜಯ ಸಾಸುವಲ್ಲಿ ಸಫಲರಾದರು. ಆ ಮೂಲಕ ವಿಶ್ವ ಚಾಂಪಿ ಯನ್ ಆಗಲು ಅಗತ್ಯವಿರುವ 7.5 ಅಂಕಗಳನ್ನು ಪಡೆದು ವಿಶ್ವ ಚಾಂಪಿಯನ್ ಆದರು.