ಕಡವೆ ಬೇಟೆಯಾಡಿದ ನಾಲ್ವರು ಬಂಧನ

Kranti Deepa

ಶಿವಮೊಗ್ಗ: ಭದ್ರಾವತಿ ತಾಲೂಕು ಉಂಬ್ಳೆಬೈಲು ರೇಂಜ್ ನ ಚೌಡಿಕಟ್ಟೆಯ ಬಳಿ ಕಡವೆ ಪ್ರಾಣಿಯನ್ನು ಶಿಕಾರಿ ಮಾಡಿದ ನಾಲ್ವರನ್ನು ಅರಣ್ಯ ಇಲಾಖೆಯವರು ಬಂಧಿಸಿ, ನ್ಯಾಯಾಂಗ ಬಂಧನಕೊಳಪಡಿಸಿದ್ದಾರೆ.

ಚೌಡಿಕಟ್ಟೆಯಬಳಿ ಕಡವೆ ಬೇಟೆಯಾಡಿ ಕಡವೆಯ ರುಂಡವನ್ನು ಛೇದಿಸಿ ಮಾಂಸವನ್ನು ಕೊಯ್ದುಕೊಂಡು ತಲೆಯನ್ನು ಕೆರೆಗೆ ಬಿಸಾಕಲಾಗಿತ್ತು. ವಿಷಯ ಅರಿತ ಅಧಿಕಾರಿಗಳು ತನಿಖೆ ಆರಂಭಿಸಿದಾಗ ಬೇಟೆ ಮಾಡಿದವರು ಸಿಕ್ಕಿಬಿದ್ದಾರೆ.

ನಿನ್ನೆ ಈ ಘಟನೆ ನಡೆದಿದ್ದು ವನ್ಯಜೀವಿ ಬೇಟೆಯಾಡಿದ ಪ್ರಕರಣದ ಅಡಿಯಲ್ಲಿ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಗೊಂದಿ ಗ್ರಾಮದ ಶಿವ ಬಿನ್ ರಾಜಪ್ಪ,(28 ) ಮತ್ತು ವೆಂಕಟೇಶ ಬಿನ್ ಮುನಿಯಪ್ಪ (60), ಎನ್ ಆರ್ ಪುರ ತಾಲೂಕು ಭೈರಾಪುರದ ಚೌಡಿಕಟ್ಟೆಯ ಮಂಜಪ್ಪ ಬಿನ್ ನಾಗಪ್ಪ (45) ಮತ್ತು ವಿನೋದ ಬಿನ್ ಮಂಜಪ್ಪ ಸಿ,(19) ಇವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ಬೈಕ್ ನ್ನವಶಕ್ಕೆ ಪಡೆಯಲಾಗಿದೆ.

ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ, ಡಿಎಫ್ ಓ ರತ್ನಪ್ರಭಾ, ಆರ್ ಎಫ್ ಒ ಗಿಡ್ಡಸ್ವಾಮಿ, ಪವನ್ , ಸಂಜು ಃಈ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Share This Article
";