ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ

Kranti Deepa

ನವದೆಹಲಿ,ಡಿ.13 :ಲೋಕಸಭೆಯಲ್ಲಿ  ಶುಕ್ರ ವಾರ ಸಂವಿಧಾನದ ವಿಷಯ ದಲ್ಲಿ ಚರ್ಚೆಯಲ್ಲಿ ಭಾಗವ ಹಿಸಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ದೇಶದ ಸಂವಿಧಾನವು ಸಂಘದ ನಿಯಮ ಪುಸ್ತಕವಲ್ಲ ಎಂಬು ದನ್ನು ಪ್ರಧಾನಿ ನರೇಂದ್ರ ಮೋದಿ ಅರಿತುಕೊಂಡಿಲ್ಲ ಎಂದು ಆರೋಪ ಮಾಡಿದ್ದಾರೆ.

ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಸಂಸತ್‌ಗೆ ಪ್ರವೇಶಿಸಿರುವ ಪ್ರಿಯಾಂಕಾ ಮಾಡಿರುವ ಚೊಚ್ಚಲ ಭಾಷಣ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿರುವ ಪ್ರಿಯಾಂಕಾ, ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ನಾಶಗೊಳಿಸಲು ತನ್ನಿಂದ ಸಾಧ್ಯವಾಗುವ ಎಲ್ಲವನ್ನು ಮಾಡಿದೆ ಎಂದು ಆರೋಪಿಸಿದ್ದಾರೆ.

ಸಂಭಲ್ ಮತ್ತು ಮಣಿಪುರ ಹಿಂಸಾಚಾರ ವಿಷಯದಲ್ಲಿ ಮೌನ ತಾಳಿರುವ ಪ್ರಧಾನಿ ಮೋದಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ದೇಶದ ಸಂವಿಧಾನವು ಸಂಘದ ನಿಯಮ ಪುಸಕ್ತವಲ್ಲ ಎಂಬುದನ್ನು ಪ್ರಧಾನಿ ಮೋದಿ ಅರ್ಥಮಾಡಿಕೊಂಡಿಲ್ಲ ಎಂದು ಅವರು ಟೀಕಿಸಿದ್ದಾರೆ.

Share This Article
";