ಶಿವಮೊಗ್ಗ: ರಂಗಾಯಣ, ಶಿವಮೊಗ್ಗವು ಬಿ.ವಿ.ಕಾರಂತರ ಜನ್ಮದಿನದ ನೆನಪಿನಲ್ಲಿ ಸೆಪ್ಟೆಂಬರ್ 21,22, ಮತ್ತು 23 ರ 2024 ರಂದು ಮೂರು ದಿನಗಳ ‘ನಾಟಕೋತ್ಸವ’ ಏರ್ಪಡಿಸಿದೆ.
ಈ ಕುರಿತಂತೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ,21,22 23 ರಂದು ಮೂರು ದಿನಗಳ ಶಿವಮೊಗ್ಗ ರಂಗಾಯಣವು ರಂಗಭೀಷ್ಮ ಬಿ.ವಿ.ಕಾರಂತರ ಜನ್ಮ ದಿನದ ನೆನಪಿನಲ್ಲಿ ಅಶೋಕನಗರದಲ್ಲಿನ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದೆ. 21 ಶನಿವಾರ ಸಂಜೆ 6.30ಕ್ಕೆ ರಂಗಸಮಾಜದ ಸದಸ್ಯರು ಮತ್ತು ರಂಗಕರ್ಮಿಮಹಾಂತೇಶ್ ಗಜೇಂದ್ರಘಡ್ ಉದ್ಘಾಟನೆ ನೆರವೇರಿಸುವರು. ನಾಟಕಕಾರರು ಮತ್ತು ರಂಗಸಮಾಜದ ಸದಸ್ಯ ರಾಜಪ ದಳವಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕ .ಪ್ರಸನ್ನ ಡಿ ಸಾಗರ ವಹಿಸಲಿದ್ದಾರೆ. ರಂಗಾಯಣ, ಶಿವಮೊಗ್ಗದ ಆಡಳಿತಾಧಿಕಾರಿ .ಶೈಲಜಾ ಎ.ಸಿ. ಉಪಸ್ಥಿತರಿರುತ್ತಾರೆ. ಉದ್ಘಾಟನಾ ಸಮಾರಂಭದ ನಂತರ ಸುಸ್ಥಿರ ಪ್ರತಿಷ್ಠಾನ ಬೆಂಗಳೂರು ಇವರ ಪ್ರಸ್ತುತಿಯ ಜೋಸೆಫ್ ಜಾನ್ ನಿರ್ದೇಶನದ ‘ಸರಸ ವಿರಸ ಸಮರಸ’ ನಾಟಕವು ಪ್ರದರ್ಶನಗೊಳ್ಳಲಿದೆ ಎಂದರು.
22 ರ ಭಾನುವಾರ ಸಂಜೆ 6.30ಕ್ಕೆ ಆಟಮಾಟ ಸಾಂಸ್ಕೃತಿಕ ಪಥ ಧಾರವಾಡ ಇವರ ಪ್ರಸ್ತುತಿಯ ಮಹಾದೇವ ಹಡಪದ ರಂಗರೂಪ ಮತ್ತು ಪರಿಕಲ್ಪನೆಯ ವಿಶ್ವರಾಜ ರಾಜಗುರು ಅಭಿನಯದ ‘ನಾ ರಾಜಗುರು’ ನಾಟಕ ಪ್ರದರ್ಶನವು ನಡೆಯಲಿದೆ.
23 ರ ಸೋಮವಾರ ಸಂಜೆ 6.30ಕ್ಕೆ ಒಡೋಲಗ ರಂಗಪರ್ಯಟನ, ಹಿತ್ಲಕೈ ಪ್ರಸ್ತುತಿಯ ಗಣಪತಿ ಬಿ ಹಿತ್ಲಕೈ ನಿರ್ದೇಶನದ ವಿವೇಕ ಶಾನಭಾಗ ರಚನೆಯ ‘ಬಹುಮುಖಿ’ ನಾಟಕವು ಪ್ರದರ್ಶನಗೊಳ್ಳಲಿದೆ ಎಂದರು.
ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳುವ ಪ್ರತಿ ನಾಟಕಕ್ಕೆ ರೂ.30 ರೂಪಾಯಿಗಳ ಪ್ರವೇಶ ಶುಲ್ಕವಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ಆಡಳಿತಾಧಿಕಾರಿ ಎ ಸಿ ಶೈಲಜಾ, ಮಾಜಿ ನಿರ್ದೇಶಕ ಕಾಂತೇಶ್ ಕದರಮಂಡಲಗಿ ಹಾಜರಿದ್ದರು.