ಗಂಧದ ಮರ ಕಡಿದ ಓರ್ವ ಸೆರೆ: ಇಬ್ಬರು ನಾಪತ್ತೆ

Kranti Deepa
ಶಿವಮೊಗ್ಗ: ಆಯನೂರು ಹೋಬಳಿ ಕೂಡಿ ಗ್ರಾಮ ಸರ್ವೆ ನಂಬರ್ 33ರ ಸೀಗೆಹಳ್ಳ ಡ್ಯಾಮ್ ನ ಹತ್ತಿರ ಮೂರು ಶ್ರೀಗಂಧ ಮರಗಳನ್ನು ಅಕ್ರಮ ಕಡಿತಲೆ ಮಾಡಿದ  ಆರೋಪಿಯನ್ನು ಹಣಗೆರೆ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು  ಬಂಧಿಸಿದ್ದಾರೆ.
ಅರೆನೆಲ್ಲಿ ಗ್ರಾಮದ ವಾಸಿ ಕಲ್ಲುಬಂಡೆ ಮಂಜಪ್ಪ ಬಿನ್ ಸಿದ್ದಪ್ಪ ಬಂಧಿತ ವ್ಯಕ್ತಿ. ಅರಣ್ಯ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಿ ಈತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ತಲೆ ಮರೆಸಿಕೊಂಡ ಇದೇ ಗ್ರಾಮದ ರಾಮಕೃಷ್ಣ ಬಿನ್ ಹನುಮಂತಯ್ಯ  ಹಾಗೂ ವಿಜಯ್ ಕುಮಾರ್ ಬಿನ್ ಉಮೇಶ  ಇವರ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಅರಣ್ಯಾಧಿಕಾರಿ ಅರವಿಂದ್ ಪಿ ಹಾಗೂ ಅವರ ಸಿಬ್ಬಂದಿಗಳಿಂದ ನಡೆದ  ಕಾರ್ಯಾಚರಣೆಯಲ್ಲಿ  ಶಿವಕುಮಾರ್ . ಕೊಟ್ರೇಶ ದಾನಮ್ಮನವರ್  ಮಂಜುನಾಥ್, ಗಿರೀಶ್, ಮಾರುತಿ, ರಾಕೇಶ್  ಭಾಗಿಯಾಗಿದ್ದರು.

Share This Article
";