ಶಿವಮೊಗ್ಗ : ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿಸಿಂಹಧಾಮದ ಪಕ್ಕದಲ್ಲಿ ಕಾಡುಪ್ರಾಣಿಗಳ ರಕ್ಷಣಾ ಕೇಂದ್ರ (ವೈಲ್ಡ್ ಎನಿಮಲ್ ರೆಸ್ಕ್ಯೂ ಸೆಂಟರ್) ಕಾಮಗಾರಿ ನಡೆಯುತ್ತಿದೆ. ರಾಜ್ಯದಲ್ಲಿ ಮೈಸೂರು ಬನ್ನೆರುಘಟ್ಟ ಮತ್ತು ಹಂಪಿಯನ್ನು ಹೊರತು ಪಡಿಸಿದರೆ, ಈ ಕೇಂದ್ರವನ್ನು ಮಲೆನಾಡಿನಲ್ಲಿ ತೆರೆಯಲಾಗುತ್ತಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಅರಣ್ಯ ಮತ್ತು ಅಭಯಾರಣ್ಯ ಹಾಗೂ ವನ್ಯಜೀವಿಗಳನ್ನು ಹೊಂದಿರುವ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಭಾಗದ ವನ್ಯಜೀವಿಗಳಿಗೆ ಈ ರೆಸ್ಟ್ಯೂ ಸೆಂಟರ್ ಸಂಜೀವಿನಿಯಾ ಗಲಿದೆ. ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಈ ಜಿಲ್ಲೆಗಳಲ್ಲಿ ರಾಜ್ಯ ಹಾಗು ರಾಷ್ಟ್ರೀಯ ಹೆದ್ದಾರಿ ಗಳು ಹಾದು ಹೋಗಿದ್ದು ವನ್ಯ ಜೀವಿಗಳಿಗೆ ವಾಹನ ಅಪಘಾತ ಗಳಾಗುವ ಸಂದರ್ಭ ಹೆಚ್ಚಿದೆ. ಹೀಗೆ ಅಪಘಾತಕ್ಕಿಡಾಗುವ ವನ್ಯಪ್ರಾಣಿಗಳನ್ನು ಇಲ್ಲಿಂದ ಮೈಸೂರಿನ ಕೇಂದ್ರಕ್ಕೆ ಸಾಗಿಸಬೇಕಾದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಾವಿಗೀಡಾಗಿವೆ. ಹಾಗಾಗಿ ಸ್ಥಳೀಯವಾಗಿ ಈ ಕೇಂದ್ರ ತೆರೆದರೆ, ಕಾಡು ಪ್ರಾಣಿಗಳ ಜೀವ ಉಳಿಸಲು ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಇಂತ ಹದ್ದೊಂದು ಕಾಮಗಾರಿ ಆರಂಭಿಸಲಾಗಿತ್ತು.
ಮಾನವ ಮತ್ತು ಪ್ರಾಣಿ ಸಂಘರ್ಷ ದಲ್ಲಿ ಸಂಕಷ್ಟಕ್ಕೆ ಸಿಲುಕುವ ವನ್ಯಪ್ರಾಣಿ ಗಳಿಗೂ ಇಂತಹ ಸೆಂಟರ್ ನಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿತ್ತು. ಬಾವಿ ಕೆರೆಯಲ್ಲಿ ಸಿಲುಕಿಕೊಂಡಿರುವ, ಅಪಘಾತಕ್ಕೀಡಾಗಿರುವ, ಜೀವನ ಸಂಧ್ಯಾಕಾಲ ದಲ್ಲಿರುವ ವನ್ಯಪ್ರಾಣಿಗಳಿಗೆ ಈ ಸೆಂಟರ್ ಆಶ್ರಯವಾಗಬೇಕಿತ್ತು. ಶಿವಮೊಗ್ಗ ಹೊರ ವಲಯದ ತ್ಯಾವರೆಕೊಪ್ಪ ಹುಲಿಸಿಂಹ ಧಾಮದ ಪಕ್ಕದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ ಐದು ಕೋಟಿ ವೆಚ್ಚದಲ್ಲಿ ವೈಲ್ಡ್ ಎನಿಮಲ್ ರೆಸ್ಕ್ಯೂ ಸೆಂಟರ್ ನಿರ್ಮಿಸ ಲಾಗಿದೆ. 2023-24 ರ ಸಾಲಿನಲ್ಲಿ ಟೆಂಡರ್ ಕರೆಯಲಾಗಿದ್ದು ಅದರಂತೆ ಆವರಣದೊಳಗೆ ಎರಡು ಚಿರತೆ ಒಂದು ಹುಲಿ ಹಾಗೂ ಒಂದು ಸಸ್ಯಹಾರಿ ವನ್ಯಪ್ರಾಣಿಗಳ ದೊಡ್ಡ ಕೇಜ್ ಗಳು ನಿರ್ಮಿಸಲಾಗಿದೆ. ಶೇಕಡಾ 90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕಾಮಗಾರಿ ಬಾಕಿ ಇದೆ.
ಪೂರ್ಣವಾಗದ ಕಾಮಗಾರಿ:
ಅಂದುಕೊಂಡಂತೆ ಆಗಿದ್ದಲ್ಲಿ ಈ ಕಾಮಗಾರಿ ಪೂರ್ಣಗೊಂಡು ಎಂಟು ತಿಂಗಳು ಕಳೆದು, ವನ್ಯಪ್ರಾಣಿಗಳ ಆರೈಕೆಯ ಕೇಂದ್ರವಾಗಬೇಕಿತ್ತು. ಆದರೆ ಸಂಬಂಸಿದ ಅರಣ್ಯಾಕಾರಿಗಳಿಗೆ ಎಲ್ಲಿ ಏನು ತೊಡಕಾಗಿದೆಯೋ ಗೊತ್ತಿಲ್ಲ. ಬೃಹತ್ ಕೇಜ್‌ಗಳ ಒಳ ಆವರಣದ ಲಾಕ್ ಸಿಸ್ಟಮ್, ಇನ್ನರ್ ಕೇಜ್ ಇತ್ಯಾದಿಗಳ ಕೆಲಸ ಆಗಿಲ್ಲ. ಈ ಕಾಮಗಾರಿಗಳು ಪೂರ್ಣಗೊಂಡನಂತರ ಉದ್ಘಾಟನೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಅರಣ್ಯ ಇಲಾಖೆಯ ಒಳಕಿವಿಗಳಲ್ಲಿ ಬೇರೆಯದ್ದೆ ಸುದ್ದಿ ಕೇಳಿಬರುತ್ತಿದೆ. ಇದನ್ನು ಅರಣ್ಯ ಸಚಿವರೇ ಕೇಳಿ ತಿಳಿದುಕೊಳ್ಳಬೇಕಿದೆ. ಹಾಗೊಂದು ವೇಳೆ ಕಾಮಗಾರಿಗೆ ಕೇವಲ ಹಣಕಾಸು ತೊಂದರೆಯಿದ್ದರೆ, ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಅದರ ಬಗ್ಗೆ ಗಮನ ಹರಿಸಬೇಕಿದೆ.
ಶುಕ್ರವಾರ ಭದ್ರಾ ಟೈಗರ್ ರಿಸರ್ವ್ 25 ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಅರಣ್ಯ. ಸಚಿವರು, ರೆಸ್ಕ್ಯೂ ಸೆಂಟರ್ ಗೂ ಒಮ್ಮೆ ಭೇಟಿ ನೀಡಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿ ಎಂದು ನೇಚರ ಮಲೆನಾಡು ಮಳೆಕಾಡು ವನ್ಯಜೀವಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ಆಗ್ರಹಿಸಿದೆ.