ಎಂ.ಶ್ರೀ ಕಾಂತ್‌ರನ್ನು ಅಧಿಕಾರವಿಲ್ಲದಿದ್ರೂ ಯಾಕೆ ಇಷ್ಟೆಲ್ಲ ಪ್ರೀತಿಸ್ತಿದ್ರು

Kranti Deepa

ಎಂ.ಶ್ರೀಕಾಂತ್

ಹೆಸರು ಕೇಳಿದರೇನೇ ಬಹಳಷ್ಟು ನೊಂದ ಹೃದಯಗಳಿಗೆ ನೆಮ್ಮದಿ ಸಿಕ್ಕಿ ಬಿಡುತ್ತೆ. ಅವರಿದ್ದರೆ ಎಲ್ಲ ಸಮಸ್ಯೆ ಗಳಿಗೂ ರಾಮಬಾಣ ಅನ್ನೋ ಭರ ವಸೆಯ ಮನೆಬಾಣ  ಎಂ.ಶ್ರೀಕಾಂತ್ ರವರು.
ಇಡೀ ಕರ್ನಾಟಕದಾದ್ಯಂತ ಬಾಗಿನ ಅರ್ಪಿಸುವ ರಾಜಕಾರಣಿಗಳು ಬೇರೆಯದೇ ರೀತಿಯಲ್ಲಿ ಆ ಕೆಲಸ ಮುಗಿಸಿಬಿಡುತ್ತಾರೆ. ತುಂಬಿದ ಜಲಾಶಯ, ನದಿ, ಹೊಳೆ ಅಂತೆಲ್ಲ ಹೊಳೆಯಲು ಪ್ರಯತ್ನಿಸುತ್ತಾರೆ. ಆದರೆ, ಶ್ರೀಕಾಂತ್ ಹಾಗಲ್ಲ; ಅವರು ನವರಾತ್ರಿ ಉತ್ಸವದ ಸಂದರ್ಭದಲ್ಲಿ ಶಿವಮೊಗ್ಗದ ಪೌರ ಕಾರ್ಮಿಕ ಹೆಣ್ಣುಮಕ್ಕಳಿಗೆ ಬಾಗಿನ ನೀಡುವ ಮೂಲಕ ಬಹಳಷ್ಟು ವರ್ಷಗಳಿಂದ ಈ ಸಮಾಜದ ಕಟ್ಟ ಕಡೆಯ ಜನ ಎಂದೇ ನೋಡುವವರಿಗೆ ವಿಶೇಷವಾಗಿ ಉತ್ತರ ನೀಡುತ್ತಾರೆ. ಕುವೆಂಪು ಮಾತಿನಂತೆ- ಇಲ್ಲಿ ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ…ಇದು ಶ್ರೀಕಾಂತ್ ರವರ ಸಿದ್ಧಾಂತ.

ಮಹಿಳಾ ಪೌರ ಕಾರ್ಮಿಕರಿಗೆ ಬಾಗಿನ ನೀಡುವ ಕಾರ್ಯಕ್ರಮ ಸದ್ದಿಲ್ಲದಂತೆ ಆಯೋಜಿಸಿದ್ದ ಎಂ.ಶ್ರೀಕಾಂತಣ್ಣ ಇವತ್ತು ಅಕ್ಷರಶಃ ಪೌರ ಕಾರ್ಮಿಕ ಮಹಿಳೆಯರಿಗೆ ಅಣ್ಣನಂತೆಯೇ ಇದ್ದರು. ಆ ಮಹಿಳೆಯರು ಕೂಡ ಪದೇ ಪದೇ ಈ ಅಣ್ಣನನ್ನು ಹಾಡಿ ಹೊಗಳಿದ್ದು ಕಂಡು ಬಂತು. ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಮಾಧ್ಯಮದವರ ಕಣ್ಣು ತಪ್ಪಿಸಿ ಆಯೋಜಿಸುವ ಎಂ.ಶ್ರೀಕಾಂತ್ ರವರು ಈ ವರ್ಷವೂ ಆ ಮಹತ್ಕಾರ್ಯ ಮಾಡಿ ಮುಗಿಸಿದರು. ನೇತ್ರಾವತಿ, ಗಂಗಮ್ಮ ಆದಿಯಾಗಿ ಬಹಳಷ್ಟು ಪೌರ ಕಾರ್ಮಿಕ ಮಹಿಳೆಯರು ಇವತ್ತು ಅಣ್ಣ ಶ್ರೀಕಾಂತ್ ರವರ ಈ ಅಪೂರ್ವ ಕಾಳಜಿಯನ್ನು ಹಾಡಿ ಹೊಗಳಿದ್ದಾರೆ.

ಗೌರಿ ಹಬ್ಬದ ಸಂದರ್ಭದಲ್ಲಿಯೇ ಪೌರ ಕಾರ್ಮಿಕ ಮಹಿಳೆಯರಿಗೆ ನಿಶ್ಯಬ್ಧವಾಗಿ ಬಾಗಿನ ಕೊಟ್ಟು ಸುದ್ದಿಯಾಗದಂತೆ ಶ್ರೀಕಾಂತ್ ರವರು ಇದ್ದುಬಿಡುತ್ತಾರೆ. ಆದರೆ, ಈ ಬಾರಿ ತಡವಾಗಿದೆ. ಅದನ್ನ ವರು ತಮ್ಮ ಭಾಷಣದಲ್ಲೇ ಪ್ರಸ್ತಾಪಿ ಸಿದ್ದು, ನವರಾತ್ರಿ ಸಂದರ್ಭದಲ್ಲಿ ಹೆಣ್ಣುಮಕ್ಕಳೇ ಶಕ್ತಿವಂತರು. ಈ ಸಂದರ್ಭದಲ್ಲೇ ಕೊಟ್ಟು ಬಿಡುವ ಮನಸು ಮಾಡಿದ್ದಾರೆ. ಅದರ ಫಲವೇ ಸೋಮವಾರದ ಕಾರ್ಯಕ್ರಮ.
ಯಾರು ಗೌರವಿಸುತ್ತಾರೋ ಬಿಡು ತ್ತಾರೋ…ಎಂ.ಶ್ರೀಕಾಂತ್ ರವರ ಕಾಳಜಿ ಪೌರ ಕಾರ್ಮಿಕ ಮಹಿಳೆಯರ ಬಗ್ಗೆ ಇರುವಂಥದ್ದು ಯಾವತ್ತಿಗೂ ಇತಿಹಾಸವಾಗೇ ಉಳಿಯಲಿದೆ.

ಒಂದೇ ಒಂದು ದಿನ ಪೌರ ಕಾರ್ಮಿಕರು ಇಲ್ಲದಿದ್ದರೆ ಶಿವಮೊಗ್ಗದಂಥ ನಗರವೇ ಕೊಳೆತು ನಾರಲು ಆರಂಭಿಸುತ್ತದೆ. ಆದರೆ, ಅವರಿಗೆ ಪುಟ್ಟದೊಂದು ಗೌರವ ಕೊಡಲು ಹಿಂದೆ ಮುಂದೆ ನೋಡುವ ಈ ಸಮಾಜದಲ್ಲಿ ಎಂ.ಶ್ರೀಕಾಂತ್ ಎಂಬ ಕಾಳಜಿಯುತ ಮನುಷ್ಯ ಆ ಕೆಲಸ ಮಾಡುವುದು ಅತ್ಯಂತ ಆಶ್ಚರ್ಯದ ಸಂಗತಿ!
ಎಂ.ಶ್ರೀಕಾಂತ್ ರಂತಹ ಹೃದಯವಂತರು ಈ ಜಗತ್ತಿನ ತುಂಬಾ ಹರಡಿಕೊಳ್ಳಲಿ-
ಆ ಪೌರ ಮಹಿಳೆ ಹೀಗೆಂದು ಹೇಳಿ ಲಟಿಕೆ ಮುರಿದಿದ್ದು ಜಗತ್ತಿಗೆ ಕೇಳಿಸಲಿ..

-ಶಿ.ಜು.ಪಾಶ

Share This Article
";