ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದು 5 ಸಾವಿರ ರೂ. ದಂಡ ಕಟ್ಟಿದ

Kranti Deepa

 ಶಿವಮೊಗ್ಗ,ಫೆ 3: ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆಯೇ ವೀಲಿಂಗ್ ಮಾಡಿ ಸಿಕ್ಕಿಬಿದ್ದ ಸವಾರನಿಗೆ 5 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಗೌರವ್ ಲಾಡ್ಜ್ ಸಮೀಪ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್‌ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರನೋರ್ವ ವೀಲಿಂಗ್ ಮಾಡಿದ್ದನು.

ಆತನ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದು, ಇದೀಗ ಶಿವಮೊಗ್ಗದ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ಕೋರ್ಟ್ 5 ಸಾವಿರ ದಂಡ ವಿಧಿಸಿ, ಆದೇಶಿಸಿದೆ.

Share This Article
";