ಮೊದಲ ಬಾರಿ ಶಬರಿಮಲೆಗೆ ವೋಲ್ವೋ ಬಸ್ ಸಂಚಾರ

Kranti Deepa
ಬೆಂಗಳೂರು,ನ.12 : ಶಬರಿಮಲೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕೆಎಸ್‌ಆರ್‌ಟಿಸಿ ಗುಡ್‌ನ್ಯೂಸ್ ಕೊಟ್ಟಿದೆ. ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿಯಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ.
ಇದೇ ನವೆಂಬರ್ 29 ರಿಂದ ಬೆಂಗಳೂರಿನಿಂದ ಶಬರಿಮಲೆಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತಾದಿಗಳು ತೆರಳುವ ಸೀಸನ್ ಇದಾಗಿದ್ದರಿಂದ ಮಾಲಾಧಾರಿಗಳ ಪ್ರಯಾಣ ಕ್ಕಾಗಿ ಮೊದಲ ಬಾರಿಗೆ ಬೆಂಗಳೂರಿನಿಂದ  ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ.
ಶಾಂತಿನಗರದಿಂದ ಶಬರಿಮಲೆ ನೀಲಕ್ಕಲ್‌ಗೆ 1,750 ರೂ. ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ನಿಗದಿ ಮಾಡಿದೆ. ಶಾಂತಿನಗರದಿಂದ ನೀಲಕ್ಕಲ್ ಹಾಗೂ ನೀಲಕ್ಕಲ್‌ನಿಂದ ಶಾಂತಿನಗರಕ್ಕೆ ವೋಲ್ವೋ ಬಸ್ ಸಂಚಾರ ಮಾಡಲಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

Share This Article
";