ವಿನೋಬನಗರ ಇನ್ಸ್‌ಪೆಕ್ಟರ್ ಚಂದ್ರಕಲಾ ಅಮಾನತ್ತು

Kranti Deepa

ಶಿವಮೊಗ್ಗ,ಏ.05 : ವಿನೋಬನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಹೊಸಮನಿ ಅವರನ್ನು ಅಮಾನತ್ತುಗೊಳಿಸಿ ದಾವಣಗೆರೆ ಐಜಿಪಿ ರವಿಕಾಂತೇಗೌಡ ಆದೇಶಿಸಿದ್ದಾರೆ.

ಕರ್ತವ್ಯದಲ್ಲಿ ದುರ್ವರ್ತನೆ ಹಾಗೂ ಅಶಿಸ್ತು ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿರುವು ದಾಗಿ ತಿಳಿದು ಬಂದಿದೆ.

ನಾಲ್ಕು ದಿನದ ಹಿಂದೆ ನಗರದ ಎಲ್ಲಾ ಪಿಐ ಹಾಗೂ ಪಿಎಸೈಗಳ ಸಭೆಯನ್ನು ಎಸ್ಪಿ ಕರೆದಿದ್ದರು. ಚಂದ್ರಕಲಾ ಹೊರತು ಪಡಿಸಿ ಸಭೆಗೆ ಉಳಿದೆಲ್ಲಾ ಪಿಐ ಹಾಗೂ ಪಿಎಸ್‌ಐ ಗಳು ಹಾಜರಾಗಿದ್ದರು. ಚಂದ್ರಕಲಾರ ಗೈರನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಅವರು ಡಿಎಸ್ಬಿ ಬ್ರಾಂಚ್‌ಗೆ ವರದಿ ಮಾಡಿ ಕೊಳ್ಳುವಂತೆ ಚಂದ್ರಕಲಾಗೆ ಸೂಚಿಸಿದ್ದರು.

ಇದೇ ವೇಳೆ ಸೂಕ್ತ ಶಿಸ್ತು ಕ್ರಮಕ್ಕೂ ಸಹ ಐಜಿಪಿಗೆ ಶಿಫಾರಸು ಮಾಡಿದ್ದರು ಎಂದು ತಿಳಿದು ಬಂದಿದೆ. ಎಸ್ಪಿ ಶಿಫಾರಸಿನ ಹಿನ್ನೆಲೆಯಲ್ಲಿ ಚಂದ್ರಕಲಾರನ್ನು ಸೇವೆಯಿಂದ ಅಮಾನತುಗೊಳಿಸಿ ಐಜಿಪಿ ಆದೇಶಿಸಿರುವುದಾಗಿ ತಿಳಿದು ಬಂದಿದೆ. ಈ ಮೊದಲು ಹಲವು ವಿಷಯದಲ್ಲಿ ಸಾಕಷ್ಟು ಚರ್ಚೆಗೆ ಚಂದ್ರಕಲಾರ ನಡವಳಿಕೆ ಎಡೆಮಾಡಿಕೊಟ್ಟಿತ್ತು.ದುಡ್ಡುಕೊಟ್ಟರೆ ಜಡ್ಜ್ ಸಹ ಜಾಮೀನು ನೀಡುತ್ತಾರೆ ಎಂದು ಹೇಳಿದ್ದ ಚಂದ್ರಕಲಾ ಈ ಸಂಬಂಧ ಇಲಾಖಾ ತನಿಖೆ ಎದುರಿಸುತ್ತಿದ್ದಾರೆ.

Share This Article
";