ಸಕ್ಕರೆ ಬೈಲಿನತ್ತಾ ವಿಕ್ರಾಂತ್ ಆನೆ

Kranti Deepa

ಹಾಸನ,ಮಾ.20: ನಗರದ ವಿವಿಧ ಕಾಡಂಚಿನ ಗ್ರಾಮಗಳಲ್ಲಿ ಉಪಟಳ ನೀಡುತ್ತಿದ್ದ ವಿಕ್ರಾಂತ್ ಎಂಬ ಕಾಡನೆಯನ್ನು ಇಂದು ಬೇಲೂರು ತಾಲೂಕಿನ ಅರೇಹಳ್ಳಿ ಎಂಬ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಆನೆಯನ್ನು ಸೆರೆಹಿಡಿದಿದ್ದಾರೆ.

ಕಳೆದ ಮೂರು – ನಾಲ್ಕು ದಿನದಿಂದ ವಿಕ್ರಾಂತ್ ಎಂಬ ಆನೆಯನ್ನು ಸೆರೆಹಿಡಿಯಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು.

ಕೊನೆಗೂ ಇಂದು ವಿಕ್ರಾಂತ್ ನನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ವಿಕ್ರಾಂತ್ ನನ್ನು ಶಿವಮೊಗ್ಗದ ಸಕ್ಕರೆ ಬೈಲು ಆನೆ ಬಿಡಾರಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸಿಸಿಎಫ್ ಎಡುಕುಂಡಲವಡ,ಸೌರಭ್ ಕುಮಾರ್ ಹಾಗೂ ಅನೇಕ ಅರಣ್ಯ ಅಧಿಕಾರಿಗಳು,ಆನೆ ಮಾವುತರು ಇದ್ದರು.

Share This Article
";