Ad imageAd image

ಸತ್ಯ ನಿಷ್ಠೆ ಕಾಯಕಕ್ಕೆ ಸಂದ ಜಯ

Kranti Deepa

ಶಿವಮೊಗ್ಗ,ಡಿ.29  : ಸತ್ಯ ನಿಷ್ಠೆ ಕಾಯಕಕ್ಕೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಿಕ್ಕಿದೆ ಎಂದು ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಹೇಳಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ಶಿವಮೊಗ್ಗ ಜಿಲ್ಲೆ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ 2019 ರಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಸ್ಪರ್ಧೆ ಮಾಡಿ 57 ಮತಗಳ ಅಂತರದಿಂದ ಆಯ್ಕೆಯಾಗಿದ್ದೆ ಐದು ವರ್ಷಗಳ ಅವಧಿಯಲ್ಲಿ ನೌಕರ ಪರವಾದ ಹಲವಾರು ಕಾರ್ಯಕ್ರಮಗಳನ್ನ ಸರ್ಕಾರದೊಂದಿಗೆ ಚರ್ಚಿಸಿ ರೂಪಿಸಿದ್ದೇನೆ ಅದರ ಪರಿಣಾಮವಾಗಿ ಈ ಬಾರಿ 67 ಮತಗಳ ಅಂತರದಿಂದ ಗೆಲುವು ಕಂಡಿದ್ದೇನೆ ಎಂದು ಹೇಳಿದರು.

ಚುನಾವಣೆ ಎಂದ ಮೇಲೆ ಎಲ್ಲಾ ತರದ ಪ್ರಕ್ರಿಯೆಗಳು ನಡೆಯುತ್ತವೆ ಆದರೆ ಅದು ಯಾವುದನ್ನು ನಾನು ಈ ಸಂದರ್ಭದಲ್ಲಿ ಟೀಕಿಸಲು ಹೋಗುವುದಿಲ್ಲ ಸರ್ಕಾರಿ ನೌಕರರು ಕೆಲಸ ಮಾಡುವಂತಹ ಸಂಘಟನೆಗೆ ಒತ್ತು ಕೊಡುವಂತಹ ವ್ಯಕ್ತಿಯನ್ನು ತಮ್ಮ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಇದಕ್ಕಾಗಿ ನಾನು ನೌಕರರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ 971 ಮತದಾರರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಮತ ಮಾಡುವ ಹಕ್ಕನ್ನ ಪಡೆದಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ 28 ಮತದಾರರು ಮತದಾನದ ಹಕ್ಕನ್ನ ಪಡೆದಿದ್ದಾರೆ ಅದರಲ್ಲಿ 27 ಮತಗಳು ನನಗೆ ಬಿದ್ದಿವೆ ಎಂದ ಅವರು ಇದೀಗ ನನ್ನ ಮುಂದೆ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನ ರೂಪಿಸುವಷ್ಟೇ ಗುರಿಯಾಗಿದೆ ಎಂದು ಹೇಳಿದರು.

ಮುಂದಿನ ವರ್ಷ nps ನೌಕರರು ಓಪಿಎಸ್ ಯೋಜನೆಗೆ ಪರಿವರ್ತನೆ ಆಗಬೇಕು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಕಾಲಾವಕಾಶ ಕೇಳಿದ್ದೇನೆ ನಾಳೆ ಬೆಳಗ್ಗೆ ಸಿಎಂ ನನಗೆ ಅವಕಾಶ ನೀಡಿದ್ದಾರೆ ಈ ಕುರಿತು ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದ ಅವರು ಕೇಂದ್ರದ ಮಾದರಿಯ ವೇತನವನ್ನು 2026 ರಲ್ಲಿ ಕೊಡಿಸುವಂತಹ ಗುರಿಯನ್ನು ಹೊಂದಲಾಗಿದೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜನವರಿ ಒಂದರಿಂದ ಜಾರಿಗೆ ಬರುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಅದನ್ನು ಅನುಷ್ಠಾನಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರಾಜಧಾನಿಗೆ ಕೆಲಸಕ್ಕೆ ಆಗಮಿಸುವಂತಹ ಸರ್ಕಾರಿ ನೌಕರರಿಗೆ ವಾಸ್ತವಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 300 ರಿಂದ 350 ರೂಂಗಳ ಭವ್ಯ ಕಟ್ಟಡವನ್ನ ರೂಪಿಸಲು ನೀಲಿ ನಕ್ಷೆಯನ್ನು ರೂಪಿಸಲಾಗಿದೆ ಮುಂದಿನ ಎರಡು ಮೂರು ತಿಂಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಸರ್ಕಾರಿ ನೌಕರರಿಗೆ ದಿನವೊಂದಕ್ಕೆ 100ರೂ ಬಾಡಿಗೆದಾರದಲ್ಲಿ ರೂಮುಗಳನ್ನ ನೀಡಲಾಗುವುದು ಎಂದವರು ಇದರೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ನೌಕರರ ಭವನ ಹಾಗೂ ಸಭಾಂಗಣ ನೌಕರರ ಮಕ್ಕಳ ಶುಭ ಕಾರ್ಯಗಳನ್ನ ಮಾಡುವುದಕ್ಕೆ ಅನುಕೂಲವಾಗುವಂತೆ ಕಲ್ಯಾಣ ಮಂಟಪವನ್ನು ಕೂಡ ನಿರ್ಮಿಸಲಾಗುವುದು ಎಂದು ಹೇಳಿದರು.

ಎರಡನೇ ಬಾರಿಗೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನೌಕರರ ಕಾರ್ಯಕ್ಕೆ ನಾನು ಚಿರಋಣಿಯಾಗಿದ್ದು ಅವರ ಅಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ನನ್ನ ವಿರುದ್ಧ ಎಷ್ಟೇ ಅಪಪ್ರಚಾರ ನಡೆದರೂ ನಾನು ಅದಕ್ಕೆ ಟೀಕಿಸುವ ಗೋಜಿಗೆ ಹೋಗಲಿಲ್ಲ ಮಾಡಿರುವ ಕಾರ್ಯ ನನ್ನ ಮುಂದಿರುವ ಗುರಿಗಳು ಇವುಗಳ ಬಗ್ಗೆ ನೌಕರರ ಹಾಗೂ ಮತದಾರರಲ್ಲಿ ವಿನಂತಿಸಿದೆ ಅದರ ಪರಿಣಾಮವಾಗಿ ಗೆಲುವು ಸುಲಭವಾಗಿ ಕರಿಯ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದರು.

ಸುದ್ದಿಗೋಷ್ಠಿಯಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪ್ರಧಾನ ಕಾರ್ಯದರ್ಶಿ ಪಾಪಣ್ಣ ಭದ್ರಾವತಿ ತಾಲೂಕು ನೌಕರ ಸಂಘದ ಅಧ್ಯಕ್ಷ ಸಿದ್ಬಸಪ್ಪ ಜಿಲ್ಲಾ ಸಂಘದ ಗೌರವಾಧ್ಯಕ್ಷ ಡಾಕ್ಟರ್ ಹಿರೇಮಠ್ ಇತರರು ಉಪಸ್ಥಿತರಿದ್ದರು.

ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳ ಕಚೇರಿ ಎಲ್ಲಿ ನಡೆದ ಸಭೆಯಲ್ಲಿ ಹೇಳಿರುವ ಬಗ್ಗೆ ಪ್ರತಿಕ್ರಿಸಿದ ಅವರು ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ನನಗೆ ಅಪಾರವಾದ ಗೌರವವಿದೆ ನಿಮ್ಮ ಪ್ರಶ್ನೆಗೆ ಜಿಲ್ಲಾಧಿಕಾರಿಗಳ ಬಳಿ ಉತ್ತರ ಸಿಗಬಹುದು.

Share This Article
";