ಶಿವಮೊಗ್ಗ , ಜ. 08 : ಶಿವಮೊಗ್ಗ ನಗರಕ್ಕೆ 24 X 7 ಕುಡಿಯುವ ನೀರಿನ ಕಾಮಗಾರಿ ನಾಗರೀಕರ ಪಾಲಿಗೆ ಹೊರೆಯಾಗಿ ಪರಿಣಮಿಸಿದೆ. ಹಲವೆಡೆ ವರ್ಷಗಳೇ ಉರುಳಿ ದರೂ ನೀರು ಪೂರೈಕೆಯಾಗುತ್ತಿಲ್ಲ. ಮತ್ತೊಂದೆಡೆ, ಅವ್ಯವಸ್ಥಿತ ಅರ್ಧಂಬರ್ಧ ಕಾಮಗಾರಿಗಳಿಂದ, ನಾಗರೀಕರು ತೊಂದರೆಪಡುವಂತಾಗಿದೆ. ಜೊತೆಗೆ ಗುಂಡಿ ಗಂಡಾಂತರಕ್ಕೆ ತತ್ತರಿಸುವಂತಾಗಿದೆ.
ಶಿವಮೊಗ್ಗದ ಶಾರದಮ್ಮ ಲೇಔಟ್ ಹಾಗೂ ಸೋಮಿನಕೊಪ್ಪ ಬಡಾವಣೆಗಳಲ್ಲಿ, ಕಾಮಗಾರಿ ಗೆಂದು ತೆಗೆಯಲಾದ ಗುಂಡಿಗಳು ಸದ್ಯ ಅಪಾಯ ಕಾರಿಯಾಗಿ ಪರಿವರ್ತಿತವಾಗಿವೆ. ಜೀವ ಬಲಿಗೆ ಕಾದು ಕುಳಿತಿವೆ. ಹಲವು ದಿನಗಳಿಂದ ಅವ್ಯವಸ್ಥೆ ಯಿದ್ದರೂ ಇಲ್ಲಿಯವರೆಗೂ ಆಡಳಿತ ಎಚ್ಚೆತ್ತು ಕೊಂಡಿಲ್ಲ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
24 X 7 ಯೋಜನೆಯಡಿ ಪೈಪ್ ಲೈನ್ ಹಾಗೂ ನಲ್ಲಿ ಸಂಪರ್ಕಕ್ಕೆ 3 ತಿಂಗಳ ಹಿಂದೆ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ಇಲ್ಲಿಯ ವರೆಗೂ ಯೋಜನೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಮನೆಗಳ ಮುಂಭಾಗ ಹಾಗೂ ರಸ್ತೆ ಇಕ್ಕೆಲಗಳಲ್ಲಿಯೇ ಗುಂಡಿಗಳನ್ನು ತೆಗೆದಿ ರುವುದರಿಂದ, ಮನೆಗಳಿಗೆ ಹೋಗಲು ಸಂಕಷ್ಟ ಪಡುವಂತಾಗಿದೆ’ ಎಂದು ಶಾರದಮ್ಮ ಲೇಔಟ್ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
‘ಮನೆ ಮುಂಭಾಗ ತೆಗೆದಿರುವ ಕೆಲ ಗುಂಡಿಗಳು ಆಳವಾಗಿವೆ. ಅತ್ಯಂತ ಎಚ್ಚರಿಕೆಯಿಂದ ಮನೆ ಯೊ ಳಗೆ ಹೋಗಿಬರುವಂತಹ ದುಃಸ್ಥಿತಿಯಿದೆ. ಸಣ್ಣ ಮಕ್ಕಳು, ವಯೋವೃದ್ದರು, ಅಶಕ್ತರು ಮನೆ ಯಿಂದ ಹೊರಹೋಗಲು ಭಯ ವಪಡುವಂತಾಗಿದೆ. ಇಷ್ಟೆಲ್ಲ ಅಪಾಯಕಾರಿ ಸ್ಥಿತಿಯಿದ್ದರೂ ಇಲ್ಲಿಯವರೆಗೂ ನಾಗರೀಕರಿಗೆ ನೆರವಾಗುವ ಕಾರ್ಯವನ್ನು ಆಡಳಿತ ನಡೆಸಿಲ್ಲ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಿ, ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಹಿರಿಯ ಅಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವ್ಯವಸ್ಥೆ ವೀಕ್ಷಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಸೋಮಿನಕೊಪ್ಪದಲ್ಲಿಯೂ ಅವಾಂತರ :ಸೋಮಿನಕೊಪ್ಪ ಬಡಾವಣೆಯಲ್ಲಿಯೂ 24 X 7 ಯೋಜನೆ ಅನುಷ್ಠಾನ ಅವ್ಯವಸ್ಥೆಯ ಆಗರ ವಾಗಿದೆ. ಪೈಪ್ ಅಳವಡಿಕೆ ಮಾಡಿ 2 ವರ್ಷ ವಾಗುತ್ತಾ ಬಂದಿದೆ. ಇಲ್ಲಿಯವರೆಗೂ ಯೋಜನೆ ಯಡಿ ನೀರು ಪೂರೈಕೆಯಾಗುತ್ತಿಲ್ಲ. ಮತ್ತೊಂದೆಡೆ, ನೀರು ಪೂರೈಕೆ ಪರೀಕ್ಷೆಗೆಂದು ಇತ್ತೀಚೆಗೆ ತೆಗೆದ ಗುಂಡಿಗಳನ್ನು ಕೂಡ ಸಮರ್ಪಕವಾಗಿ ಮುಚ್ಚಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಬಡಾವಣೆಯ ಕೋಟೆಗಂಗೂರು ಮುಖ್ಯ ರಸ್ತೆಯ ಸರ್ಕಾರಿ ಶಾಲೆ ಸಮೀಪ ಪೈಪ್ ಲೈನ್ ದುರಸ್ತಿಗೆಂದು ಕಳೆದ ಒಂದು ತಿಂಗಳ ಹಿಂದೆ ತೆಗೆದ ಬೃಹತ್ ಗುಂಡಿಯನ್ನು ಇಲ್ಲಿಯವರೆಗೂ ಮುಚ್ಚಿಲ್ಲ. ಸ್ಥಳದಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯೂ ಮಾಡಿಲ್ಲ. ಸ್ವಲ್ಪ ಹೆಚ್ಚುಕಮ್ಮಿಯಾದರೂ ವಾಹನ ಸವಾರರು, ಪಾದಚಾರಿಗಳು ಗುಂಡಿಗೆ ಬೀಳು ವಂತಹ ದುಃಸ್ಥಿತಿಯಿದೆ ಎಂದು ಸೋಮಿನಕೊಪ್ಪ ನಿವಾಸಿಗಳು ದೂರಿದ್ದಾರೆ.
ಸಂಬಂಸಿದವರ ಗಮನಕ್ಕೆ ತಂದರೂ ಇಲ್ಲಿಯ ವರೆಗೂ ಅವ್ಯವಸ್ಥೆ ಸರಿಪಡಿಸಿಲ್ಲ. ನಿರ್ಲಕ್ಷ್ಯ, ಬೇಜವಾಬ್ದಾರಿ ಧೋರಣೆ ತಳೆದಿದ್ದಾರೆ. ತಕ್ಷಣವೇ ಗುಂಡಿ ಗಂಡಾಂತರ ಪರಿಹಾರಕ್ಕೆ ಕ್ರಮಕೈ ಗೊಳ್ಳಬೇಕು. ಸಮರ್ಪಕವಾಗಿ ಯೋಜನೆ ಅನು ಷ್ಠಾನಗೊಳಿಸಿ, ನಾಗರೀಕರಿಗೆ ನೀರು ಪೂರೈಸಬೇಕು ಎಂದು ಸೋಮಿನಕೊಪ್ಪ ನಿವಾಸಿಗಳು ಆಗ್ರಹಿಸಿದ್ದಾರೆ.