ಶಿವಮೊಗ್ಗ,ಫೆ .04 : ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ದಾಳಿ ನಡೆದಿದೆ. ಎರಡು ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ ದಂಡೆಯಲ್ಲಿ ವ್ಯಕ್ತಿಯೊಬ್ಬನು ದ್ವಿಚ ಕ್ರ ವಾಹನವನ್ನು ನಿಲ್ಲಿಸಿಕೊಂಡು, ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದ್ದು ಗಾಂಜಾ ಮಾರಾಟ ಮಾಡುತ್ತಿದ್ದ ಸಾಗರ ತಾಲೂಕಿನ ಬಿಲಗೋಡಿ ಪ್ರತಾಪ್ ಎಸ್, (26) ಎನ್ನುವವನನ್ನು ಬಂಧಿಸಲಾಗಿದೆ. ಆರೋಪಿತನಿಂದ ಅಂದಾಜು ಮೌಲ್ಯ 6,000 ರೂಗಳ 349 ಗ್ರಾಂ ತೂಕದ ಒಣ ಗಾಂಜಾ, ರೂ 600/ ನಗದು ಹಣ, ಮತ್ತು ಕೃತ್ಯ ಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 8,000/- ರೂಗಳ ಮೊಬೈಲ್ ಪೋನ್ ಹಾಗೂ ಅಂದಾಜು ಮೌಲ್ಯ 20,000ರೂಗಳ ದ್ವಿ ಚಕ್ರ ವಾಹನ ಸೇರಿದಂತೆ ಒಟ್ಟು 34,600 ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣ ಕೀರ್ತಿ ನಗರದ ದೇವಂಗಿ ಪಾರ್ಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುರೇಂದ್ರ ಬಬ್ಲು ಎಂಬಾತನನ್ನು ಬಂಧಿಸಲಾಗಿದೆ.
15000 ರೂ ಮೊಬೈಲ್ 363 ಗ್ರಾಂ ಮೌಲ್ಯದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.