ಶಿವಮೊಗ್ಗ ಜ. 08 : ಸರ್ವೇಸಾಮಾನ್ಯವಾಗಿ ರಸ್ತೆ, ಸರ್ಕಲ್ ಗಳಲ್ಲಿ ರಾಜಕಾ ರಣಿಗಳು, ಸಿನಿಮಾ ನಟರು, ಮತ್ತೀತರ ಪ್ರಚಾರದ ಕಟೌಟ್ ಗಳು ರಾರಾಜಿಸುತ್ತವೆ. ಆದರೆ ಇನ್ನು ಮುಂದೆ ಶಿವಮೊಗ್ಗದ ಪ್ರಮುಖ ಸರ್ಕಲ್ ? ರಸ್ತೆಗಳಲ್ಲಿ ‘ಟ್ರಾಫಿಕ್ ಪೊಲೀಸ’ರ ಕಟೌಟ್ ಗಳು ಕೂಡ ರಾರಾಜಿಸಲಿವೆ.
ಹೌದು. ಸಂಚಾರಿ ನಿಯಮಗಳ ಪಾಲನೆ ಹಾಗೂ ಜಾಗೃತಿ ಮೂಡಿಸಲು, ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಜೊತೆಗೆ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡ ವಿಸುವುದು ಸೇರಿದಂತೆ ನಾನ ಕ್ರಮಗಳ ಪಾಲನೆ ಮಾಡುತ್ತದೆ.
ಶಿವಮೊಗ್ಗ ಪಶ್ಚಿಮ ಟ್ರಾಫಿಕ್ ಠಾಣೆ ಪೊಲೀಸರು ವಾಹನ ದಟ್ಟಣೆ ಹೆಚ್ಚಿರುವ, ಅಪಘಾತ ವಲಯ ಸರ್ಕಲ್ ಹಾಗೂ ರಸ್ತೆಗಳಲ್ಲಿ ‘ಟ್ರಾಫಿಕ್ ಪೊಲೀಸ್ ಕಟೌಟ್’ ನಿಲ್ಲಿಸಲಾರಂಭಿಸಿದೆ! ಈ ಮೂಲಕ ವಾಹನ ಚಾಲಕರ ಗಮನ ಸೆಳೆಯುವ ವಿನೂತನ ಕ್ರಮಕ್ಕೆ ಮುಂದಾಗಿದೆ.
ಜ. 7 ರ ಮಂಗಳವಾರ ಶಿವಮೊಗ್ಗ ನಗರದ ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿಯ ಸರ್ಕಾರಿ ಶಾಲೆ ಸರ್ಕಲ್, ಮಹೇಂದ್ರ ಶೋ ರೂಂ ಮುಂಭಾಗದ ಕ್ರಾಸ್, ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಕ್ರಾಸ್ ಹಾಗೂ ಸೂಳೇಬೈಲು ರಸ್ತೆಯಲ್ಲಿ ‘ಟ್ರಾಫಿಕ್ ಪೊಲೀಸ್ ಕಟೌಟ್’ಗಳನ್ನು ನಿಲ್ಲಿಸಲಾಗಿದೆ.
ಸ್ವತಃ ಜಿಲ್ಲಾ ರಕ್ಷಣಾಕಾರಿ ಜಿ ಕೆ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ‘ಟ್ರಾಫಿಕ್ ಪೊಲೀಸ್ ಕಟೌಟ್’ ನಿಲುಗಡೆ ಮಾಡಿದ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಟ್ರಾಫಿಕ್ ಪೊಲೀಸರ ವಿನೂತನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸುರೇಶ್ ಬಿ, ಟ್ರಾಫಿಕ್ ಇನ್ಸ್’ಪೆಕ್ಟರ್ ಡಿ ಕೆ ಸಂತೋಷ್ ಕುಮಾರ್, ಪಶ್ಚಿಮ ಸಂಚಾರಿ ಠಾಣೆ ಸಬ್ ಇನ್ಸ್’ಪೆಕ್ಟರ್ ತಿರು ಮಲೇಶ್ ಸೇರಿದಂತೆ ಟ್ರಾಫಿಕ್ ಠಾಣೆ ಅಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರಿಫ್ಲೆಕ್ಟ್ : ನಿಧಾನವಾಗಿ ಚಲಿಸಿ (ಗೋ ಸ್ಲೋ) ಎಂಬ ಘೋಷ ವಾಕ್ಯ ತೋರ್ಪಡಿಸುವ ಆಳೆತ್ತರದ ‘ಟ್ರಾಫಿಕ್ ಪೊಲೀಸ್ ಕಟೌಟ್’ ಗಳು ದೂರದಿಂದ ನೋಡಿದರೆ, ಟ್ರಾಫಿಕ್ ಪೊಲೀಸ್ ಸಿಬ್ಬಂದಿಯಂತೆ ಗೋಚರಿಸುತ್ತದೆ. ಸದರಿ ಕಟೌಟ್ ಗಳು ರಿಫ್ಲೆಕ್ಟ್ (ಪ್ರತಿಫಲನ) ಆಗುವುದರಿಂದ, ಸಂಜೆ ಹಾಗೂ ರಾತ್ರಿಯ ವೇಳೆ ವಾಹನದ ಹೆಡ್ ಲೈಟ್ ಬೆಳಕಿಗೆ ಗೋಚರಿಸುತ್ತವೆ.
‘ಟ್ರಾಫಿಕ್ ಪೊಲೀಸ್ ಕಟೌಟ್’ ಗಳು ಅಪಘಾತ ಪ್ರದೇಶಗಳಲ್ಲಿ, ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆ.