ನಾಳೆಯಿಂದ ಜೀ಼ ಕನ್ನಡ ವಾಹಿನಿಯಲ್ಲಿ ಶುರುವಾಗ್ತಿದೆ ಭರ್ಜರಿ ಬ್ಯಾಚುಲರ್ಸ ಸೀಸನ್ 2

Kranti Deepa

ಬೆಂಗಳೂರು, ಫೆ. 20 : ಶುರುವಾಗ್ತಿದೆ ‘ಭರ್ಜರಿ ಬ್ಯಾಚುಲರ್ಸ್’ ನ ಪ್ರೀತಿಯ ಪಯಣ; ವೀಕೆಂಡ್ ನಲ್ಲಿ ಎಲ್ಲಿಯೂ ಹೋಗದಿರಲಿ ನಿಮ್ಮ ಗಮನ ಧಾರಾವಾಹಿಗಳು, ರಿಯಾಲಿಟಿ ಶೋ ಗಳು, ಗೆಮ್ ಶೋ ಗಳಿಂದ ವೀಕ್ಷಕರ ಮನಗೆದ್ದು ನಂಬರ್ 1 ಸ್ಥಾನದಲ್ಲಿ ಇರುವ ಮನರಂಜನೆಯ ಮಹಾತಾಣ ಜೀ಼ ಕನ್ನಡ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1, ಮತ್ತು ಸೂಪರ್ ಕ್ವೀನ್ ನಂತಹ ಅನೇಕ ಜನಮೆಚ್ಚಿದ ರಿಯಾಲಿಟಿ ಶೋಗಳನ್ನು ಜನರ ಮುಂದಿಟ್ಟು ಅದರಲ್ಲಿ ಯಶಸ್ವೀ ಆಗಿರುವ ಕೀರ್ತಿ ಜೀ಼ ಕನ್ನಡ ವಾಹಿನಿಗೆ ಸಲ್ಲುತ್ತದೆ.

ಈಗ ಮತ್ತೆ ಅಂತಹದೇ ಪ್ರಯತ್ನಕ್ಕೆ ಕೈ ಹಾಕಿರುವ ಜೀ಼ ಕನ್ನಡ ವಾಹಿನಿಯು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವನ್ನು ನಿಮ್ಮ ಮುಂದಿಡಲಿದೆ. ಭರ್ಜರಿ ಬ್ಯಾಚುಲರ್ಸ್ ಸೀಸನ್ 1 ನ ಯಶಸ್ಸಿನ ಬಳಿಕ ಮತ್ತಷ್ಟು ವಿಭಿನ್ನವಾಗಿ, ಎಂಟರ್ಟೈನಿಂಗ್ ಆಗಿ ಬರುತ್ತಿರುವ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ ಎಂದರೆ ತಪ್ಪಾಗಲ್ಲ. ಭರ್ಜರಿಯಾಗಿ ಶೋಗೆ ಬರುವ ಸ್ಪರ್ಧಿಗಳು ಬ್ಯಾಚುಲರ್ಸ್ ಆಗಿಯೇ ಉಳಿಯುತ್ತಾರಾ ಅಥವಾ ಬ್ರಹ್ಮಚಾರಿತ್ವಕ್ಕೆ ಬಾಯ್ ಬಾಯ್ ಹೇಳ್ತಾರಾ ಅನ್ನೋದು ಈ ಶೋನ ಕಾನ್ಸೆಪ್ಟ್ ಆಗಿದ್ದು ಫನ್ ಗೆ ಇಲ್ಲಿ ಯಾವುದೇ ಕೊರತೆ ಇರಲ್ಲ.

ಬ್ಯಾಚುಲರ್ಸ್ ಗೆ ಭರ್ಜರಿ ಆಗಿ ಪ್ರೀತಿ ಪಾಠ ಮಾಡಲು ಕನಸುಗಾರ, ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ಡಾ. ವಿ ರವಿಚಂದ್ರನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾರಾಮ್ ಇರಲಿದ್ದು ತರ್ಲೆ ಮಾತು, ವಿಭಿನ್ನ ನಿರೂಪಣಾ ಶೈಲಿಯಿಂದ ಕನ್ನಡಿಗರ ಮನಗೆದ್ದ ನಿರಂಜನ್ ದೇಶಪಾಂಡೆ ಕಾರ್ಯಕ್ರಮದ ನಿರೂಪಣಾ ಜವಾಬ್ದಾರಿಯನ್ನು ಹೊರಲಿದ್ದಾರೆ.

ಈ ಬಾರಿ ಗಿಲ್ಲಿನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ರಕ್ಷಕ್ ಬುಲೆಟ್ ಅವರು ಬ್ಯಾಚುಲರ್ಸ್ ಗಳಾಗಿ ಕಾಣಿಸಿಕೊಳ್ಳಲಿದ್ದು ಅವರ ಮನಸು ಕದಿಯುವ ಏಂಜಲ್ ಗಳು ಯಾರಾಗಲಿದ್ದಾರೆ ಅನ್ನೋದು ಕಾದು ನೋಡಬೇಕಿದೆ,ಭರ್ಜರಿ ಬ್ಯಾಚುಲರ್ಸ್ ಸೀಸನ್ 2′ ನಲ್ಲಿ ರೋಚಕವಾದ ಇನ್ ಡೋರ್ ಮತ್ತು ಔಟ್ ಡೋರ್ ಸುತ್ತುಗಳಿದ್ದು ಇಲ್ಲಿ ಫನ್, ಎಮೋಷನಲ್ ಮುಮೆಂಟ್ಸ್ ಇಂದ ಹಿಡಿದು ರೋಮ್ಯಾನ್ಸ್ ತನಕ ಎಲ್ಲಾ ತರಹದ ಭಾವನೆಗಳು ಕಾಣಸಿಗಲಿದೆ. ಇನ್ನು ಆಡೋ ಬ್ಯಾಚುಲರ್ಸ್ ಗೆ ಮಾತ್ರವಲ್ಲದೆ ಈ ಟಾಸ್ಕ್ ಗಳನ್ನೂ ನೋಡೋ ನಿಮಗೆ 100% ಮನರಂಜನೆ ಸಿಗೋದಂತು ಗ್ಯಾರಂಟಿ.

ಇನ್ನು ಈ ಟಾಸ್ಕ್ ಗಳಲ್ಲಿ ಬ್ಯಾಚುಲರ್ ಗಳು ಹೇಗೆ ಪರ್ಫಾರ್ಮ್ ಮಾಡ್ತಾರೆ, ಅವ್ರಿಗೆ ಏಂಜಲ್ ಗಳು ಎಷ್ಟು ಸಾಥ್ ಕೊಡ್ತಾರೆ ಅಂತ ಕಾದು ನೋಡಬೇಕಾಗಿದೆ.ಬ್ಯಾಚುಲರ್ ಗಳ ಆಟ ಎಷ್ಟು ಭರ್ಜರಿ ಆಗಿರುತ್ತೆ, ಏಂಜಲ್ ಗಳ ಹೃದಯ ಕದಿಯೋಕೆ ಏನೇನು ಸಾಹಸಕ್ಕೆ ಕೈ ಹಾಕ್ತಾರೆ ಇವೆಲ್ಲದಕ್ಕೂ ಉತ್ತರ ಸಿಗ್ಬೇಕು ಅಂದ್ರೆ ವೀಕ್ಷಿಸಿ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಇದೆ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.

Share This Article
";