ಶಿವಮೊಗ್ಗ,ಡಿ.13 : ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಡಿ. 15 ರಂದು ನಗರದ ಈಡಿಗರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ ಧೀರ ದೀವರ ಬಳಗದ ಸಂಚಾಲಕ ಸುರೇಶ್ ಬಾಳೆಗುಂಡಿ, ಬೂಮಣ್ಣಿಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆ ಮತ್ತು ಪ್ರದರ್ಶನ ಈ ಕಾರ್ಯಕ್ರಮದಲ್ಲಿರುತ್ತದೆ ಎಂದರು.
ಕಾರ್ಯಕ್ರಮಕ್ಕೆ ಶುಭ ಚಾಲನೆಯನ್ನು ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಹೊಸನಗರದ ಸಾರಗನಜಡ್ಡು ಕಾರ್ತಿಕೇಯಪೀಠದ ಯೋಗೇಂದ್ರ ಅವಧೂತರು, ಸಿಗಂಧೂರಿನ ಧರ್ಮದರ್ಶಿ ಎಸ್. ರಾಮಪ್ಪ ಧರ್ಮದರ್ಶಿ ನೀಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಆಗಮಿಸುವರು ಎಂದರು.
ಮಧ್ಯಾಹ್ನ 2 ಗಂಟೆಗೆ ಧೀರ ದೀವರು ಪುರಸ್ಕಾರ ಮತ್ತು ರಾಜ್ಯಮಟ್ಟದ ಚಿತ್ತಾರಗಿತ್ತಿ ಪ್ರಶಸ್ತಿ ಪ್ರದಾನ ಸಮಾರ೦ಭ ಅಂದು ಮಧ್ಯಾಹ್ನ2 ಗಂಟೆಗೆ ನಡೆಯಲಿದೆ. ಸಮಾರೋಪ ನುಡಿಯನ್ನು ಕೆರೆ ಬೇಟೆ ಚಲನಚಿತ್ರ ನಿರ್ದೇಶಕ ರಾಜಗುರು ನೆರವೇರಿಸುವರು. ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧುಬಂಗಾರಪ್ಪ ಪ್ರದಾನ ಮಾಡುವರು. ಅತಿಥಿಗಳಾಗಿ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಪಂ ಉಪ ಕಾರ್ಯದರ್ಶಿ ಕೆ.ಆರ್. ಸುಜಾತಾ,ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಸಾಗರದ ರಾಮಮನೋಹರ ಲೋಹಿಯಾ ಟ್ರಸ್ಟ್‌ನ ಡಾ|| ರಾಜನಂದಿನಿ ಕಾಗೋಡು, ಜಿಲ್ಲಾ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ ಆಗಮಿಸುವರು.
ಮಾಜಿ ಶಾಸಕ ಡಾ|| ಜಿ.ಡಿ. ನಾರಾಯಣಪ್ಪ, ಮಾಜಿ ಶಾಸಕ ಬಿ. ಸ್ವಾಮಿರಾವ್, ಧೀರ ದೀವರ ಬಳಗದ ಸಂಚಾಲಕ ಸುರೇಶ್ ಕೆ. ಬಾಳೆಗುಂಡಿ, ದೀವ ರ ಸಾಂಸ್ಕೃತಿಕ ವೈಭವದ ಸಂಚಾಲಕ ನಾಗರಾಜ ನೇರಿಗೆ ಉಪಸ್ಥಿತರಿರುವರು ಎಂದರು.
ಈ ಬಾರಿಯ ಧೀರ ದೀವರು ಪ್ರಶಸ್ತಿಯನ್ನು ಐವರಿಗೆ ಘೋಷಿಸಲಾಗಿದೆ. ಅವರೆಂದರೆ, ಸಮಾಜವಾದಿ ಹೋರಾಟಗಾರ ಈಡೂರು ಪರಶುರಾಮಪ್ಪ ಅವರ ಪತ್ನಿ ರಾಧಮ್ಮ, ಇನ್ನೊಬ್ಬ ಸಮಾಜವಾದಿ ಹೋರಾಟಗಾರ ಬಿ ಎಸ್ ಪುರುಷೋತ್ತಮ್, ಹಿರಿಯ ಪತ್ರಕರ್ತ, ಸಾಹಿತಿ ಲಕ್ಷ್ಮಣ ಕೊಡಸೆ, ಮಾಜಿ ಹೋರಾಟಗಾರ, ಚಿಂತಕ ರಾಜಪ್ಪ ಮಾಸ್ತರ್, ಮುಡುಬದ ನಾಟಿ ವೈದ್ಯ ಈಶ್ವರ ನಾಯ್ಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.-
– ಸುರೇಶ್ ಬಾಳೆಗುಂಡಿ