ನಾಳೆ ಮಾಂಸ ಮಾರಾಟ ನಿಷೇಧ

Kranti Deepa

ಶಿವಮೊಗ್ಗ,ಆ.26 :  ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ ೨೭ ರಂದು ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ನಗರದ ಎಲ್ಲಾ ಮಾಂಸ ಮಾರಾಟದ ಮಳಿಗೆಗಳು, ಪ್ರಾಣಿವಧೆ ಮಾಡುವ ಘಟಕಗಳು ಮತ್ತು ಸಂಬಂಧಿತ ವ್ಯಾಪಾರಗಳು ಆ.27  ರಂದು ಸಂಪೂರ್ಣವಾಗಿ ಸ್ಥಗಿತಗೊಳ್ಳಬೇಕು. ಈ ಕುರಿತು ಸಾರ್ವಜನಿಕರ ಸಹಕಾರ ಕೋರಿರುವ ಆಯುಕ್ತರು, ಆದೇಶವನ್ನು ಉಲ್ಲಂಘಿಸಿ ವ್ಯಾಪಾರ ನಡೆಸುವ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಧಾರವು ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ.

Share This Article
";