ಶಿವಮೊಗ್ಗ,ಏ.9 : ಪ್ರಸಿದ್ಧ ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದಿಢೀರ್ ಮಣ್ಣು ಕುಸಿದು ಬಿದ್ದು 3 ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ ಸಮೀಪದ ಹೇರ್ಪಿನ್ ತಿರುವಿನಲ್ಲಿ ದುರಂತ ನಡೆದಿದ್ದು, ಘಟನೆಯಲ್ಲಿ ಮತ್ತಷ್ಟು ಕಾರ್ಮಿಕರು ಗಾಯಗೊಂಡಿರುವ ಹಾಗೂ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ರಾಘವೇಂದ್ರ ತಂದೆ ಕೃಷ್ಣಮೂರ್ತಿ 37 ಚಕ್ಕಾರು ನಗರ, ರಾಜು 30ವರ್ಷ ವಾಸ ನೀಲವಗಲ್ಲು ಹಾವೇರಿ ತಾಲ್ಲೂಕು, ಶಬ್ಬೀರ್ 40ವರ್ಷ ವಾಸ ನೆಲವಗಲ್ಲು ಎಂದು ತಿಳಿದುಬಂದಿದೆ. ಇನ್ನೂ ಸುಮಂತ ಹಾಗು ಪರಮೇಶ್ ಎಂಬಿಬ್ಬರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
