ತೀರ್ಥಹಳ್ಳಿ,ಸೆ.10 : ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಕೇವಲ 2 ಗಂಟೆಯೊಳಗೆ ಆಗುಂಬೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸಂಕದಹೊಳೆ ಸಮೀಪದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆಗುಂಬೆ ಶ್ರೀರಾಮಮಂದಿರದಲ್ಲಿ ಸೋಮವಾರ ರಾತ್ರಿ ರಾಮ ದೇವರ ಕೈಯಲ್ಲಿದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳವು ಮಾಡಲಾಗಿತ್ತು.
ವಿಷಯ ತಿಳಿಯುತ್ತಲೆ ತನಿಖೆ ಆರಂಭಿಸಿದ ಪೊಲೀಸರು ಸುಂಕದ ಹೊಳೆ ಸಮೀಪದ ಏಳಮಲೈ ವಾಸಿ ಮನೋಜ್ ಆಲಿಯಾಸ್ ಗುಂಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆತನಿಂದ ರಾಮಮಂದಿರದಲ್ಲಿ ಕಳವು ಆಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆಗುಂಬೆ ಠಾಣೆ ಸಬ್ ಇನ್ಸ್‌ಪೆಕ್ಟರ್ ಶಿವನಗೌಡ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ದಸ್ತಗಿರಿ ಮಾಡಿದೆ. ಕಾಯಾಚರಣೆಯಲ್ಲಿ ಸಿಬ್ಬಂದಿ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಚೇತನ, ಆದರ್ಶ ಪಾಲ್ಗೊಂಡಿದ್ದರು