ಭದ್ರಾವತಿ, ಡಿ. 19 : ಭದ್ರಾವತಿ ಹೊಸಮನೆಯ ಕೇಶವಾಪುರ ಬಡಾವಣೆಯ ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.
ಮನೆಯವರೆಲ್ಲ ಶೀಶೈಲಕ್ಕೆ ತೆರಳಿ ಹಿಂತಿರುಗಿದಾಗ ಮನೆಯ ಬಾಗಿಲಿನ ಇಂಟರ್ ಲಾಕ್ ಮುರಿದು ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಕಳ್ಳರು ಬೋರ್ಡ್ ಮತ್ತು ಬೀರುವಿನಲ್ಲಿಟ್ಟಿದ್ದ 15 ಸಾವಿರ ರೂ. ನಗದು, 87 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ.
ಒಟ್ಟು 4.35 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಮನೆ ಮಾಲೀಕ ಗೋಪಾಲ ರಾವ್ ದೂರಿನಲ್ಲಿ ತಿಳಿಸಿದ್ದಾರೆ.
ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.