ಶಿವಮೊಗ್ಗ, ಡಿ. 16 : ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಗಮಿಸುವ ಪ್ರವಾಸಿಗರ ಹಾಗೂ ಡಿಸೆಂಬರ್ ಮಾಹೆಯಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳ ಪ್ರವಾಸದ ಅನುಕೂಲಕ್ಕಾಗಿ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಯನ್ನು ಡಿಸೆಂಬರ್ ಮಾಹೆಯ 17, 24 ಮತ್ತು 31ರ ಮಂಗಳವಾರದಂದು ಸಹ ತೆರೆದಿರುತ್ತದೆ.
ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಬಹುದೆಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.