ಬಸ್ ನಲ್ಲಿ ನಿಲ್ದಾಣಕ್ಕೆ ಬರುವಾಗ ಚಿನ್ನಾಭರಣ ಕಳ್ಳತನ

Kranti Deepa

ಶಿವಮೊಗ್ಗ: ಬಂಗಾರದ ಕಿವಿರಿಂಗ್ ರಿಪೇರಿ ಮಾಡಿಸಲು ಬಜಾರ್ ಗೆ ಬಂದಿದ್ದ ಮಹಿಳೆ ಬಂಗಾರದ ಅಂಗಡಿ ಬಂದ್ ಮಾಡಿದ ಪರಿಣಾಮ ಬಸ್ ನಿಲ್ಧಾಣಕ್ಕೆ ಹೋಗಿ ಮನೆವಸ್ತುಗಳನ್ನು ಖರೀದಿಸಿ ಬಿಲ್ ನೀಡಲು ಮುಂದಾದಾಗ ಚಿನ್ನಾಭರಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಹೊಸಳ್ಳಿಯ ನಿವಾಸಿಯ ಮಹಿಳೆ ತಮ್ಮ ದೊಡ್ಡಮ್ಮನ ಮಗಳ ಜೊತೆ ಸೆ.21 ರಂದು ಬಟ್ಟೆ ಖರೀದಿ ಮಾಡಲು ಮತ್ತು ಬಂಗಾರದ ಕಿವಿರಿಂಗ್ ರಿಪೇರಿ ಹಾಗೂ ಮನೆ ಸಾಮಾನುಗಳನ್ನು ಖರೀದಿಸಲು ಊರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಗಾಂಧಿಬಜಾರ್ ನಲ್ಲಿ ಬಟ್ಟೆ ಮತ್ತು ಮನೆ ಸಾಮಾನುಗಳನ್ನು ಖರೀದಿಸಿದ ನಂತರ ಕಿವಿರಿಂಗ್ ರಿಪೇರಿ ಮಾಡಿಸಲು ಅಂಗಡಿಗೆ ಹೋಗಿ ನೋಡಿದಾಗ ಅಂಗಡಿ ಬಂದ್ ಆಗಿದ್ದರಿಂದ ವಾಪಾಸ್ ಊರಿಗೆ ಹೋಗಲು ಶಿವಪ್ಪನಾಯಕ ಸರ್ಕಲ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನ್ನು ಹತ್ತಿ ಬಸ್ ಸ್ಟ್ಯಾಂಡ್ ಗೆ ಬಂದಿದ್ದಾರೆ.

ಬಸ್ ಸ್ಟ್ಯಾಂಡ್ ನಲ್ಲಿ ಮದ್ಯಾಹ್ನ 04-30  ಗಂಟೆಗೆ ಸ್ಮಾರ್ಟ್ ಬಜಾರ್ ನಲ್ಲಿ ಸಾಮಾನುಗಳನ್ನು ಖರೀದಿಸಿದ ನಂತರ ಬಿಲ್ ಕೊಡಲು ಬ್ಯಾಗ್ ನಲ್ಲಿದ್ದ ಪರ್ಸ್ ನ್ನು ತೆಗೆಯಲು ಹೋದಾಗ ಬ್ಯಾಗಿನ ಜಿಪ್ ಅರ್ಧ ತೆರೆದಿದ್ದು, ತಕ್ಷಣ ಮಹಿಳೆಯು ಗಾಭರಿಯಾಗಿ ಬ್ಯಾಗ್ ನ್ನು ಚೆಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳಿದ್ದ ಪರ್ಸ್ ಇರಲಿಲ್ಲ.

ಪರ್ಸ್ ನಲ್ಲಿ 1)2010  ನೇ ಸಾಲಿನಲ್ಲಿ ಖರೀದಿಸಿ ಸುಮಾರು 6 ಗ್ರಾಂ 800 ಮೀಲಿ ತೂಕದ ಸುಮಾರು 25,000/-ರೂ ಬೆಲೆಬಾಳುವ ಬಂಗಾರದ ಸ್ನೇಕ್ ಚೈನ್ ಮತ್ತು 2) ಸುಮಾರು 3 ಗ್ರಾಂ 500ಮೀಲಿ ತೂಕದ 12,000/ -ರೂ ಬೆಲೆಬಾಳುವ ಒಂದು ಜೊತೆ ಬಂಗಾರದ ಕಿವಿರಿಂಗ್ ಇದ್ದುದ್ದ ಪರ್ಸ್ ಕಳುವಾಗಿತ್ತು.

ಶಿವಪ್ಪನಾಯಕ ಸರ್ಕಲ್ ನಿಂದ ಬಸ್ ಸ್ಟ್ಯಾಂಡ್ ಗೆ ಬಸ್ ನಲ್ಲಿ ಬರುವಾಗ ಅವರ ಬ್ಯಾಗ್ ನ ಜಿಪ್ ನ್ನು ತೆಗೆದು ಬಂಗಾರದ ಒಡವೆಗಳಿದ್ದ ಪರ್ಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
";