ಎಡಬಿಡದೆ ಸುರಿಯುತ್ತಿರುವ ಮಳೆ : ಪತ್ರಿಕೆ ವಿತರಕರ ಪರದಾಟ

Kranti Deepa

ಶಿವಮೊಗ್ಗ,ಅ.20 : ಶಿವಮೊಗ್ಗ ನಗರದಲ್ಲಿ ಮಧ್ಯರಾತ್ರಿಯಿಂದ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಪತ್ರಿಕೆ ವಿತರಕರು ಮನೆಗಳಿಗೆ ಪತ್ರಿಕೆ ಹಂಚಲು ಆಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ದೈನಂದಿನ ಆಗುಹೋಗುಗಳನ್ನ ಒಳಗೊಂಡ ರಾಜಕೀಯ ಹಾಗೂ ಇನ್ನಿತರೆ ವಿಷಯಗಳ ಸಮಗ್ರ ಮಾಹಿತಿ ಒಳಗೊಂಡ ಪತ್ರಿಕೆಗಳನ್ನ ಮನೆ ಮನೆಗೆ ತಲುಪಿಸುವ ಕಾಯಕದಲ್ಲಿ ತೊಡಗಿರುವ ಪತ್ರಿಕ ವಿತರಕರು ಇಂದು ನಿಜಕ್ಕೂ ಮಳೆಯಿಂದಾಗಿ ಹೈರಾಣ ಆಗಿದ್ದಾರೆ.

ತಮ್ಮ ದೈನಂದಿನ ಕಾಯಕದ ಮಾಡದೇ ಇರುವುದರಿಂದ ನೊಂದಿರುವ ಪತ್ರಿಕಾ ವಿತರಕರು ಮಳೆಗೆ ಹಿಡಿ ಶಾಪ ಹಾಕುತ್ತಿದ್ದಾರೆ .

ಎರಡು ಗಂಟೆ ವಿರಾಮ ನೀಡಿದ್ದರೂ ಸಹ ನಾವು ನಮ್ಮ ಕಾಯಕವನ್ನ ಸಂಪೂರ್ಣವಾಗಿ ಮುಗಿಸುತ್ತಿದ್ದೆವು ಈ ರೀತಿ ಮಳೆ ಸುರಿಯುತ್ತಿರುವುದಿಂದ ಪತ್ರಿಕೆಗಳನ್ನ ಮಳೆಯಲ್ಲಿ ನೆನೆಸದೆ ಮನೆಗಳಿಗೆ ತಲುಪಿಸುವುದು ತೀವ್ರ ಕಷ್ಟಕರವಾಗಿದೆ.

ಆಯಾ ಪತ್ರಿಕೆ ಅವರು ಸಹ ನಮಗೆ ಯಾವುದೇ ರಕ್ಷಣಾ ಸಾಮಗ್ರಿಗಳನ್ನ ನೀಡಿಲ್ಲ ಇದರಿಂದಾಗಿ ಪತ್ರಿಕೆಗಳನ್ನ ಮಳೆಯ ನೀರಿಗೆ ನೆನೆಸದೆ ಓದುಗರಿಗೆ ತಲುಪಿಸುವ ಕಾಯಕ ಅತ್ಯಂತ ಕಷ್ಟಕರ ಆದ್ದರಿಂದ ಇಂತಹ ಮಳೆಗಾಲದ ಸಂದರ್ಭದಲ್ಲಿ ಆಯಾ ಪತ್ರಿಕೆಯವರು ಪತ್ರಿಕೆಗಳು ನೆನೆಯದ ಹಾಗೆ ಒಂದು ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಅಭಿಪ್ರಾಯ ಪತ್ರಿಕಾ ವಿತರಕರ ವಲಯದಲ್ಲಿ ಕೇಳಿ ಬರುತ್ತಿದೆ.

 

Share This Article
";