ತೋಟದ ಕಾರ್ಮಿಕರನ್ನು ವಿಮಾನದಲ್ಲಿ ಗೋವಾ ಪ್ರವಾಸಕ್ಕೆ ಕರೆದೊಯ್ದ ಮಾಲೀಕ

Kranti Deepa
ಶಿವಮೊಗ್ಗ, ಫೆ.18 :ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ರೈತನೋರ್ವ ಶಿವಮೊಗ್ಗದಿಂದ ಗೋವಾಗೆ ವಿಮಾನದಲ್ಲಿ ಮೂರು ದಿನದ ಪ್ರವಾಸಕ್ಕೆ ಕರೆದೊಯ್ದಿದ್ದಾರೆ.
ಕೂಲಿ ಕಾರ್ಮಿಕರ ಆಸೆಯನ್ನು ಈಡೇರಿಸುವ ರೈತ ವಿಶ್ವನಾಥ್, ಶಿವಮೊಗ್ಗ ಏರ್‌ಪೋರ್ಟ್‌ನಿಂದ 11 ಕೂಲಿ ಕಾರ್ಮಿಕರನ್ನು ಮಂಗಳವಾರ  ಗೋವಾಕ್ಕೆ ಪ್ರವಾಸದ ಸಲುವಾಗಿ  ಕರೆದೊಯ್ದಿದ್ದಾರೆ.
ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ಕೆಲಸದ ನಿಮಿತ್ತ ವಿಮಾನ ದಲ್ಲಿ ಓಡಾಟ ಮಾಡುತ್ತಿದ್ದರು. ಇದನ್ನು ತಿಳಿದಿದ್ದ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕ ಮಹಿಳೆಯರು, ತಾವು ವಿಮಾನದಲ್ಲಿ ಸಂಚಾರ ಮಾಡುವ ಆಸೆಯನ್ನು ಹೊರಹಾಕಿದ್ದರು.
ಅವರ ಆಸೆಯನ್ನು ಈಡೇರಿಸುವ ಸಲುವಾಗಿ ರೈತ ವಿಶ್ವನಾಥ್, ಎಲ್ಲರನ್ನೂ ವಿಮಾನದಲ್ಲಿ ಗೋವಾಗೆ ಕರೆದೊಯ್ದಿದ್ದಾರೆ.
ವಿಶ್ವನಾಥ್ ತಮ್ಮ ಅಡಿಕೆ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದ 12 ಜನ ಕೂಲಿ ಕಾರ್ಮಿಕ ಮಹಿಳೆಯರನ್ನು ತಿರುಪತಿಗೆ ಕರೆದೊಯಲು ನಿರ್ಧರಿಸಿದ್ದರು. ಆದರೆ ವಿಮಾನದ  ಟಿಕೆಟ್ ಸಿಗದ ಕಾರಣ ಗೋವಾ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದರು.
ಕೊನೆ ಕ್ಷಣದಲ್ಲಿ ಕೌಟುಂಬಿಕ ಕಾರಣಕ್ಕ್ಕೆ ಒಬ್ಬರು ಪ್ರವಾಸದಿಂದ ದೂರವುಳಿದಿದ್ದು 11 ಜನರು  ತೆರಳಿದ್ದಾರೆ. ಫೆಬ್ರವರಿ 20 ರಂದು ಶಿವಮೊಗ್ಗಕ್ಕೆ ವಿಮಾನದ ಮೂಲಕ ವಾಪಸ್ ಬಂದು, ನಂತರ ವಿಜಯನಗರಕ್ಕೆ ಹಿಂದುರುಗಲಿದ್ದೇವೆ ಎಂದು ರೈತ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.

Share This Article
";