ಶಿವಮೊಗ್ಗ,ಫೆ.20 : ಫೆ.16ರಂದು ರಾತ್ರಿ ರಾತ್ರಿ 9-30 ಗಂಟೆ ಸುಮಾರಿಗೆ ಸೂಳೆಬೈಲಿನ ಲ್ಲಿ ರಸ್ತೆ ಮಧ್ಯೆ ಹುಟ್ಟುಹಬ್ಬ ಆಚರಿಸುತ್ತ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಹಬೀದ್ ಎನ್ನುವವರ ಮನೆಯ ಮುಂದೆ ರಸ್ತೆಯ ಮೇಲೆ ಬೈಕ್ ಗಳನ್ನು ಅಡ್ಡ ಇಟ್ಟುಕೊಂಡು ಕೆಲವರು ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದರು. ಆಸ್ಪತ್ರೆಗೆ ತೆರಳಿದ್ದ ಮುನಾವರ್ ಪಾಷಾ ಎಂಬುವರು ಮನೆಗೆ ಹೋಗುವಾಗ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಹಬೀದ್, ಸಾದಿಕ್, ಹಬೀದ್ ನ ತಂದೆ ಬಾಷಾ, ಹಾಗೂ ಇತರರು ಸೇರಿಕೊಂಡು ಹುಟ್ಟುಹಬ್ಬದ ಕೇಕ್ ಕಟ್ ಮಾಡುತ್ತಿದ್ದಾಗ ಮುನಾವರ್ ಪಾಷಾ ರಸ್ತೆ ಮಧ್ಯದಲ್ಲಿ ಕೇಕ್ ಕಟ್ ಮಾಡುತ್ತಾ ಇದ್ದೀರಲ್ಲಾ ಸೈಡ್ ನಲ್ಲಿ ಅಥವಾ ಮನೆಯೊಳಗೆ ಹೋಗಿ ಕೇಕ್ ಕಟ್ ಮಾಡಿ ಎಂದಿದ್ದಕ್ಕೆ ಮೇಲಿನವರೆಲ್ಲ ಪಾಷಾ ಅವರನ್ನು ಅಡ್ಡಗಟ್ಟಿ’ ನಿನ್ಯಾರೂ ಹೇಳೋದಕ್ಕೆ, ಮುಚ್ಚಿಕೊಂಡು ಹೋಗೋದ ತಾನೇ ಎಂದು ಅವಾಚ್ಯವಾಗಿ ಬೈಯ್ದಿದ್ದಾರೆ. ಹಲ್ಲೆ ನಡೆಸಿ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ತಪ್ಪಿಸಿಕೊಂಡಾಗ ಚಾಕು ಪಾಷಾರ ಎಡಗಣ್ಣಿನ ಹತ್ತಿರ ತಾಗಿ ರಕ್ತ ಗಯವಾಗಿದೆ. ಪಾಷಾ ಹೆದರಿ ಮನೆಯೊಳಗೆ ಹೋಗಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಆದರೂ ಬಿಡದ ಗ್ಯಾಂಗ್ ಮನೆ ಹತ್ತಿರ ಬಂದು ಜೀವಬೆದರಿಕೆ ಹಾಕಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.