ದರೋಡೆ, ಅಪಹರಣ, ಕಳ್ಳತನ ದ ಕುಖ್ಯಾತರು ಬೈಕ್ ಕದ್ದು ಸಿಕ್ಕಿಬಿದ್ದರು

Kranti Deepa
ಶಿವಮೊಗ್ಗ,ಫೆ. 14 :  ಉಡುಪಿ ಜಿಲ್ಲೆಯ ಪಡುಬಿದ್ರಿ ಪೇಟೆಯಲ್ಲಿ 20 ದಿನಗಳ ಹಿಂದೆ ನಡೆದಿದ್ದ ಬುಲೆಟ್ ಬೈಕ್‌ ಕಳ್ಳತನಕ್ಕೆ ಸಂಬಂಧಿಸಿದಂತೆ ಅಲ್ಲಿನ  ಪೊಲೀಸರು ಅಂತ‌ರ ಜಿಲ್ಲಾ ಬೈಕ್‌ ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತರೆಂದರೆ, ಶಿವಮೊಗ್ಗದ  ಸೂಳೆಬೈಲು ನಿವಾಸಿ ಮೊಹಮದ್ ರುಹಾನ್ ಹಾಗೂ ಗೋಪಾಳದ ನಿವಾಸಿ ತಾಜುದ್ದೀನ್ ಪಿ.ಕೆ ಯಾನೆ ತಾಜು ಬಂಧಿತರು.
ಇವರಿಂದ ಕಳವು ಮಾಡಿದ ಬುಲೆಟ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ್ದ ಮಾರುತಿ ರಿಟ್ಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜ. 21ರಂದು ರಾತ್ರಿಪಡುಬಿದ್ರಿ ಪೇಟೆಯಲ್ಲಿ ಬುಲೆಟ್ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಶಿವಮೊಗ್ಗದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಕೋಟೆ, ವಿನೋಬನಗರ, ತುಂಗಾ ನಗರ, ದೊಡ್ಡಪೇಟೆ, ಆಗುಂಬೆ ಪೊಲೀಸ್ ಠಾಣೆಗಳಲ್ಲಿ ದರೋಡೆ, ಅಪಹರಣ, ವಾಹನ ಕಳವು, ಸಾಗರ ನಗರ ಮತ್ತು ಗ್ರಾಮಾಂತರ ಪೊಲೀಸ್‌ ಠಾಣೆಗಳಲ್ಲಿ ದರೋಡೆ ಮತ್ತು ವಾಹನ ಕಳ್ಳತನ, ಹಾಸನ ಜಿಲ್ಲೆಯಲ್ಲಿ ದರೋಡೆ ಮತ್ತು ಮನೆ ಕಳವು ಪ್ರಕರಣ, ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಮತ್ತು ಮನೆ ಕಳವು ಪ್ರಕರಣಗಳು ದಾಖಲಾಗಿವೆ.
ಆರೋಪಿ ತಾಜುದ್ದೀನ್ ಮೇಲೆ  ಶಿವಮೊಗ್ಗ  ವಿನೋಬನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ಅಪಹರಣ ಮತ್ತು ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗ ತಿಯಲ್ಲಿದೆ.

Share This Article
";