ಭದ್ರಾವತಿ, ಮೇ.06 : ಕ್ರಿಕೆಟ್ ವಿಚಾರವಾಗಿ ಸ್ನೇಹಿತರ ಮಧ್ಯೆ ಜಗಳವಾಗಿ ಓರ್ವನನ್ನು ಹತ್ಯೆ ಮಾಡಲಾಗಿದೆ. ಮತ್ತೋರ್ವನಿಗೆ ಗಾಯವಾಗಿದೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಅರುಣ್ (23) ಕೊಲೆಯಾಗಿದ್ದಾನೆ. ಸಂಜಯ್ ಎಂಬಾತ ಗಾಯಗೊಂಡಿದ್ದಾನೆ. ಅರುಣ್‌ನನ್ನು ಸಚಿನ್, ಸಂಜೀವ್ ಮೊದಲಾದ ಐದಾರು ಜನ ಸೇರಿ ಕೊಲೆ ಮಾಡಿದ್ದಾರೆ. ಇವರೆಲ್ಲ ಸೋಮವರ ಮಧ್ಯಾಹ್ನ ಕ್ರಿಕೆಟ್ ಮ್ಯಾಚ್ ಆಡಿದ್ದರು.
ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಕೊಲೆಯಾಗಿರುವ ಅರುಣ್, ಸಚಿನ್‌ಗೆ ಕಪಾಳಮೋಕ್ಷ ಮಾಡಿದ್ದನು. ನಂತರ ಸಂಜೆ ವೇಳೆಗೆ ಸಚಿನ್ ಸಹ ಅರುಣ್‌ಗೆ ಕಪಾಳಕ್ಕೆ ಹೊಡೆದಿದ್ದಾನೆ. ರಾತ್ರಿ 10:30 ರ ವೇಳೆ ಅರುಣನ್ನು ಕರೆಸಿಕೊಂಡ ಸಚಿನ್, ಮತ್ತು ಸಂಜು ಮೊದಲಾದವರು ಅರುಣ್ ಎದೆಗೆ ಚಾಕುನಿಂದ ಇರಿದು ಕೊಲೆ ಮಾಡಿದ್ದರೆಂದು ಎಸ್ ಪಿ ವಿವರಿಸಿದ್ದಾರೆ.
ಸಂಜೀವ್ ಎಂಬಾತ ಪೋಲಿಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನೊಂದಿಗೆ ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರೆಲ್ಲ ಸ್ನೇಹಿತರಾಗಿದ್ದು ಒಂದೇ ಏರಿಯಾದವರಾಗಿದ್ದಾರೆ. ಅರುಣ್ ಮತ್ತು ಸಚಿನ್ ಮಧ್ಯೆ ಉಂಟಾಗಿದ್ದ ವೈಮನಸ್ಸು ಕೊಲೆಗೆ ಕಾರಣ ಎಂದಿದ್ದಾರೆ.